ಎರಡು ದಿನದ ಮುಷ್ಕರಕ್ಕೆ ಕರೆನೀಡಿದ ರಾಷ್ಟ್ರೀಕೃತ ಬ್ಯಾಂಕುಗಳು-ಕಾರಣ ಏನ್ ಗೊತ್ತಾ?

ಭಾರತೀಯ ಸ್ಟೇಟ್ ಬ್ಯಾಂಕ್, ಅದರ ಸಹವರ್ತಿ ಬ್ಯಾಂಕ್ ಮತ್ತು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರ ಸಂಘ ವೇತನ ಪರಿಷ್ಕರಣೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೇ 30, 31ರಂದು ಎರಡು ದಿನದ ಮುಷ್ಕರಕ್ಕೆ ಕರೆಯನ್ನು ನೀಡಿವೆ.
ಇಂಡಿಯನ್ ಬ್ಯಾಂಕ್ಸ್ ಅಶೋಷಿಯೇಶನ್ ಮೂಲಕ ಯುಬಿಎಫ್‌ಎ ಮುಷ್ಕರಕ್ಕೆ ಸಂಬಂಧಿಸಿದಂತೆ ಇತರ ನೌಕರರ ಸಂಘಟನೆಗಳಿಗೆ ತಿಳಿಸಿದ್ದು, ಎರಡು ದಿನ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದಿರಬಹುದು. ಕೇಂದ್ರ ಹಣಕಾಸು ಮತ್ತು ಕಾರ್ಮಿಕ ಸಚಿವಾಲಯಕ್ಕೆ ತಮ್ಮ ಬೇಡಿಕೆಗಳ ಮೆಮೊರಾಂಡಮ್ ಅನ್ನು ಬ್ಯಾಂಕ್ ಒಕ್ಕೂಟ ಸಲ್ಲಿಸಿದ್ದು, ಬೇಡಿಕೆಗೆ ಸ್ಪಂದಿಸಿದರೆ ಮುಷ್ಕರ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಮೇ 30ರಂದು ಬೆಳಗ್ಗೆ ಆರು ಗಂಟೆಯಿಂದಲೇ ಮುಷ್ಕರ ಶುರು ಮಾಡುವುದಾಗಿ ತಿಳಿಸಿದ್ದಾರೆ.
Comments