ಬೆಂಗಳೂರಿಗರೇ ಹುಷಾರ್ : ಅಬ್ಬರಿಸಲು ಬರ್ತಿದೆ ಮತ್ತೊಂದು ಚಂಡಮಾರುತ
ಸಾಗರ್ ಚಂಡಮಾರುತದ ಅಬ್ಬರದ ನಂತರ ಇದೀಗ ಮತ್ತೊಂದು ಚಂಡಮಾರುತ ಮಿಕುನು ಅಬ್ ಅಬ್ಬರಿಸಲು ಸಜ್ಜಾಗಿದೆ. ಅರಬ್ಬಿ ಸಮುದ್ರದ ಮೂಲಕ ಚಂಡಮಾರುತವು ಹಾದು ಹೋಗಲಿದ್ದು, ಇದರಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಮಾನ ವರದಿ ತಿಳಿಸಿದೆ.
ಲಕ್ಷದ್ವೀಪ, ಭಾರತೀಯ ಕರಾವಳಿ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳು ಈ ಚಂಡ ಮಾರುತದ ಅಬ್ಬರಕ್ಕೆ ಸಿಲಕುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದರಿಂದ ಶನಿವಾರದವರೆಗೂ ಕೂಡ ಭಾರೀ ಮಳೆಯಾಗುವ ಎಲ್ಲಾ ಸಾಧ್ಯತೆಗಳು ಇದೆ. ಚಂಡ ಮಾರುತವು ಕೇರಳದಲ್ಲಿಯೂ ಕೂಡ ತನ್ನ ಅಬ್ಬರವನ್ನು ತೋರಲಿದ್ದು, ಬೆಂಗಳೂರಿನಲ್ಲಿಯೂ ಕೂಡ ಚಂಡಮಾರುತದ ಪರಿಣಾಮ ಕಂಡು ಬರಲಿದೆಯಂತೆ,ಮೇ 23 ರಿಂದ ಮೇ 26ರವರೆಗೆ ಚಂಡಮಾರುತದ ಅಬ್ಬರ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ..
Comments