ದಾಂಪತ್ಯ ಜೀವನಕ್ಕೆ ಕಾಲಿಡಲಿರುವ 'ರಾಧಾ ರಮಣ' ಧಾರಾವಾಹಿಯ ಪ್ರಖ್ಯಾತ ನಟ
ರಮಣ್ ಅನ್ನುವ ಈ ಹೆಸರು ಸದ್ಯ ಕಿರುತೆರೆಯಲ್ಲಿ ಭಾರಿ ಪ್ರಖ್ಯಾತಿ ಪಡೆದುಕೊಂಡಿದೆ. ಸಾಕಷ್ಟು ಅಭಿಮಾನಿಗಳನ್ನು ಧಾರಾವಾಹಿ ಮೂಲಕವೇ ಗಿಟ್ಟಿಸಿಕೊಂಡಿರುವ ನಟ ಸ್ಕಂದ ಅಶೋಕ್. TRP ರೇಟಿಂಗ್ ನಲ್ಲಿ ಟಾಪ್ ಲೀಸ್ಟ್ ನಲ್ಲಿ ಸೇರಿಕೊಂಡಿರುವ ರಾಧ-ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ಆನ್ ಸ್ಕ್ರೀನ್ ಸ್ಟೈಲ್ ಹಾಗೂ ಮಾತನಾಡುವ ಶೈಲಿಯಿಂದಲೇ ಮೆಚ್ಚಿಕೊಂಡಿದ್ದ ಅವರ ಮಹಿಳಾ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಇದೆ. ಅದೆನಪ್ಪಾ ಅಂದರೆ ರಮಣ್ ಅವರು ಮದುವೆ ಆಗುತ್ತಿದ್ದಾರೆ.
ಈಗಾಗಲೇ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಸ್ಕಂದ ಅಶೋಕ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ ಹಿಂದಿ, ಮಲೆಯಾಳಂ, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿಯೂ ಅಭಿನಯ ಮಾಡಿದ್ದಾರೆ. ಅದರ ಜೊತೆ ಜೊತೆಗೆ ವಿಡಿಯೋ ಆಲ್ಬಂ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಮಯ ಕೂಡಿ ಬಂದಿದೆ ದಾಂಪತ್ಯ ಜೀವನಕ್ಕೆ ಕಾಲಿಡಲು. ಹೌದು...., ವಯ್ಯತಿಕ ಜೀವನದಲ್ಲಿ ಒಂಟಿ ಆಗಿರುವ ಸ್ಕಂದ ಅಶೋಕ್ ಜಂಟಿ ಆಗುವ ಸಮಯ ಬಂದಿದೆ. ತಮ್ಮ ಬಹುದಿನದ ಗೆಳತಿ/ಪ್ರೇಯಸಿಯ ಜೊತೆ ರಮಣ್ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಹಾಗಾದರೆ ಸ್ಕಂದ ಅಶೋಕ್ ಪ್ರೀತಿ ಮಾಡಿದ ಹುಡುಗಿ ಯಾರು? ಮದುವೆ ಯಾವಾಗ? ಎನ್ನುವ ಈ ನಿಮ್ಮ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಮುಂದೆ ಓದಿ
*ರಾಧ ರಮಣ ನಾಯಕನಿಗೆ ಮದುವೆ?
ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಲ್ಕು ವರ್ಷದಿಂದ ಪ್ರೀತಿ ಮಾಡುತ್ತಿದ್ದ ತಮ್ಮ ಪ್ರೀತಿಯ ಹುಡುಗಿ ಶಿಕಾ ಪ್ರಸಾದ್ ಅವರನ್ನು ಮದುವೆ ಆಗುತ್ತಿದ್ದಾರೆ. ಸದ್ಯ ಫ್ಯಾಷನ್ ಡಿಸೈನರ್ ಆಗಿರುವ ಶಿಕಾ ಅವರನ್ನ ಸ್ಕಂದ ನಾಲ್ಕು ವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದಾರೆ.
*ಮದುವೆ ಯಾವಾಗ?
ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶಿಕಾ ಪ್ರಸಾದ್ ಹಾಗೂ ಸ್ಕಂದ ಅಶೋಕ್ ಇದೇ ತಿಂಗಳು ಅಂದರೆ ಮೇ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಗುರು ಹಿರಿಯರ ಆಶೀರ್ವಾದದೊಂದಿಗೆ ಈ ಸಮಾರಂಭದ ಮದುವೆ ನಡೆಯಲಿದೆ.
Comments