ಇಂದು ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ
ಇಂದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ತಂದೆಯನ್ನು ಸ್ಮರಿಸಿದ್ದಾರೆ.
ದೇಶದ ಪ್ರತಿಯೊಬ್ಬರಿಗೂ ಹೇಗೆ ಪ್ರೀತಿ, ಗೌರವಗಳನ್ನು ತೋರಿಸಬೇಕೆಂಬುದನ್ನು ತಮಗೆ ತಂದೆ ಹೇಳಿಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ತಮ್ಮ ಸೋದರಿ ಪ್ರಿಯಾಂಕಾ ಗಾಂಧಿಯವರ ಜೊತೆಗೆ ದೆಹಲಿಯ ವೀರಭೂಮಿಯಲ್ಲಿರುವ ರಾಜೀವ್ ಗಾಂಧಿ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು. ಕಾಂಗ್ರೆಸ್ ವರಿಷ್ಠೆ, ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕಾಂಗ್ರೆಸ್ ನ ಹಿರಿಯ ನಾಯಕರಾದ ಸುಶೀಲ್ ಕುಮಾರ್ ಶಿಂಧೆ, ಮಲ್ಲಿಕಾರ್ಜುನ ಖರ್ಗೆ ಕೂಡ ವೀರಭೂಮಿಗೆ ತೆರಳಿ ಗೌರವ ನಮನ ಸಲ್ಲಿಸಿದರು. ದ್ವೇಷ ಸಾಧಿಸಿಕೊಂಡು ಹೋಗುವವರಿಗೆ ಅದು ಜೈಲಿನಂತೆ, ಅದನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ ಎಂಬುದನ್ನು ನನಗೆ ತಂದೆ ಹೇಳಿಕೊಟ್ಟಿದ್ದಾರೆ. ಇಂದು ಅವರ ಪುಣ್ಯತಿಥಿಯಂದು ಅವರು ನನಗೆ ಹೇಳಿಕೊಟ್ಟ ಎಲ್ಲರನ್ನೂ ಪ್ರೀತಿ, ಆದರಗಳಿಂದ ಕಾಣಬೇಕೆಂಬ ಪಾಠವನ್ನು ಪಾಲಿಸಿಕೊಂಡು ಹೋಗುತ್ತಿದ್ದೇನೆ. ಇದು ಒಬ್ಬ ತಂದೆಯಾಗಿ ಮಗನಿಗೆ ನೀಡುವ ಅತ್ಯಂತ ಅಮೂಲ್ಯ ಉಡುಗೊರೆ ಎಂದು ರಾಹುಲ್ ಗಾಂಧಿ ಅವರು ಬರೆದುಕೊಂಡಿದ್ದಾರೆ.
Comments