ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ಶುಭಾಶಯ ಕೋರಿದ ಮೋದಿ

ನವದೆಹಲಿ, ಇಂದು ತಮ್ಮ 86 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಶುಭ ಹಾರೈಸಿದ್ದಾರೆ.
ತಿರುಪತಿ ವೆಂಕಟಸ್ವಾಮಿ ಸನ್ನಿಧಿಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ, ದೇವೇಗೌಡರಿಗೆ ರಾಜ್ಯ ರಾಜಕಾರಣದಲ್ಲಾಗುತ್ತಿರುವ ಕಳವಳ ಮನಸ್ಸಿಗೆ ನೆಮ್ಮದಿ ನೀಡುತ್ತಿಲ್ಲ. ಆದ್ದರಿಂದಲೇ ತಿರುಪತಿಯಲ್ಲಿ ಅವರು ವೆಂಕಟ್ರಾದ್ರಿ ಗೆ ವಿಶೇಷ ಪೂಜೆ, ಹೋಮ, ಹವನ ನೆಡೆಸುತ್ತಿದ್ದಾರೆ. ಅದೇನೇ ಇರಲಿ, ಇಳಿ ವಯಸ್ಸಿನಲ್ಲೂ ಹುರುಪಿನಿಂದ ಓಡಾಡುವ, ದೇವೇಗೌಡರು ನೆಲ, ಜಲ, ಭಾಷೆ ಎಂದೊಡನೆ ವಯಸ್ಸು ಮರೆತು ಹೋರಾಟಕ್ಕೆ ನಿಲ್ಲುವ ಈ ಕರುಣಾಮಯಿಗೆ ದೇಶದಾದ್ಯಂತ ಹಲವು ಮಹನೀಯರು ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ. ಶುಭಾಶಯವನ್ನು ಕೋರಿದ ಮೋದಿ "ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೊಂದಿಗೆ ಮಾತನಾಡಿ ಅವರಿಗೆ ಜನ್ಮದಿನದ ಶುಭಕೋರಿದ್ದೇನೆ. ಅವರಿಗೆ ಆರೋಗ್ಯ, ಆಯುಷ್ಯವನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
Comments