ಹಿರಿಯ ಹಾಸ್ಯ ನಟ ಅಕ್ಕಿ ಚೆನ್ನ ಬಸಪ್ಪ ವಿಧಿವಶ- ಇಂದು ಅಂತ್ಯಕ್ರಿಯೆ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸಿನಿರಸಿಕರ ಗಮನವನ್ನು ಸೆಳೆದಿದ್ದಂತಹ ಹಿರಿಯ ನಟರಾದ ಅಕ್ಕಿ ಚೆನ್ನ ಬಸಪ್ಪ ನೆನ್ನೆ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಹಾಸ್ಯ ಕಲಾವಿದನಾಗಿಯೂ ಕಾಣಿಸಿಕೊಂಡಿದ್ದ ನಟ ಅಕ್ಕಿ ಚೆನ್ನಬಸಪ್ಪ ಅವರಿಗೆ 90 ವರ್ಷ ವಯಸ್ಸಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು.. ನಟ ಅಕ್ಕಿ ಚೆನ್ನ ಬಸಪ್ಪ ಅವರ ಪತ್ನಿ ಐದು ವರ್ಷದ ಹಿಂದೆಯೇ ತೀರಿಕೊಂಡಿದ್ದರು. ಮಕ್ಕಳು ಹಾಗೂ ಯಾರೂ ನೋಡಿಕೊಳ್ಳವರು ಇಲ್ಲದ ಕಾರಣ ಕೆಂಗೇರಿ ಸಮೀಪದ ಅನಾಥಶ್ರಮದಲ್ಲಿ ಆಶ್ರಯವನ್ನು ಪಡೆದಿದ್ದರು. ಇಂದು ಅವರ ಅಂತ್ಯಕ್ರಿಯೆ ಕೆಂಗೇರಿ ಸಮೀಪ ನೆರವೇರಲಿದೆ ಎಂದು ತಿಳಿದು ಬಂದಿದೆ.
Comments