ಒಳ್ಳೆ ಹುಡುಗ ಪ್ರಥಮ್ ನೂತನ ಸರ್ಕಾರ ರಚನೆಗೂ ಮುನ್ನವೇ ಕೊಟ್ಟ ಮನಿವಿ ಇದು..!

ನಿನ್ನೆಯಷ್ಟೇ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ ಸರ್ಕಾರ ರಚನೆ ಯಾರು ಮಾಡುತ್ತಾರೆಎಂಬ ಗೊಂದಲವು ಇನ್ನೂ ಹಾಗೆಯೇ ಉಳಿದಿದೆ..ಆದರೆ ಹೊಸ ಸರ್ಕಾರಕ್ಕೆ ರಚನೆ ಆಗುವ ಮುನ್ನವೇ ಬಿಗ್ ಬಾಸ್ ಖ್ಯಾತಿಯ ಲಾರ್ಡ್ ಪ್ರಥಮ್ ಹೊಸ ಸರ್ಕಾರಕ್ಕೆ ಒಂದು ಮನವಿಯನ್ನು ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಯಾರೇ ಗೆದ್ದರೂ ಖುಷಿ ಎಂದಿದ್ದ ಪ್ರಥಮ್ ಸರ್ಕಾರ ರಚನೆಗೂ ಮುನ್ನವೇ ಚಿತ್ರರಂಗದ ಪರವಾಗಿ ಒಂದು ಮನವಿಯನ್ನುಸಲ್ಲಿಸಿದ್ದಾರೆ.
ನಿನ್ನೆ ತಾನೆ ಹಿರಿಯ ಕಲಾವಿದರಾದ ಅಕ್ಕಿ ಚನ್ನಬಸಪ್ಪನವರು ಕೊನೆಯುಸಿರೆಳೆದಿದ್ದಾರೆ. ಕೊನೆಯಕಾಲದಲ್ಲಿ ಯಾರೂ ಆಶ್ರಯವಿಲ್ಲದೆ ಅನಾಥಾಶ್ರಮದಲ್ಲಿ ಅಕ್ಕಿ ಚೆನ್ನಬಸಪ್ಪ ತಮ್ಮ ಕೊನೆಯುಸಿರೆಳೆದರು. ಇದರಿಂದ ಬೇಸರಗೊಂಡ ಪ್ರಥಮ್ "ತುಂಬಾ ಬೇಜಾರಾಗುತ್ತೆ ಸರ್ಕಾರ ಹಿರಿಯ ಕಲಾವಿದರ ರಕ್ಷಣೆಗೆ ಏನಾದರೂ ಮಾಡಲೇಬೇಕು. ನಾವಂತೂ ಇಲ್ಲೇ ಇರ್ತೀನಿ ಒದ್ದಾಡಿಕೊಂಡು ಸಾಯ್ತೀನಿ ಇದು ನಮ್ಮ ಕರ್ಮ. ಆದರೆ ಹಿರಿಯ ರಂಗಭೂಮಿ ಕಲಾವಿದರ ಪಾಡೇನು ದಯವಿಟ್ಟು ಯಾವುದೇ ಸರ್ಕಾರ ಬರಲಿ ಇಂತಹ ಕಲಾವಿದರ ಕೊನೆ ದಿನಗಳಲ್ಲಿ ನೆಮ್ಮದಿಯಾಗಿ ಜೀವಿಸಲು ನೆರವಾಗಿ" ಎಂದು ಮನವಿ ಸಲ್ಲಿಸಿದ್ದಾರೆ.
Comments