ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ರಾಜ್ಯದ ಜನರಿಗೆ ಕರೆಂಟ್ ಶಾಕ್..

ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಜನತೆಗೆ ಕರೆಂಟ್ ಶಾಕ್ ನೀಡಿದೆ. ವಿದ್ಯುತ್ ದರದ ಹೆಚ್ಚಳದಲ್ಲಿ ಹೆಚ್ಚಳವಾಗಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ರಾಜ್ಯ ವಿದ್ಯುತ್ ಕಂಪೆನಿಗಳು ವಿದ್ಯುತ್ ದರವನ್ನು ಹೆಚ್ಚಳ ಮಾಡಿರುವುದಾಗಿ ಪ್ರಕಟಿಸಿದೆ. ಪ್ರತಿ ಯೂನಿಟ್‍ನ ವಿದ್ಯುತ್ ದರವನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ.13, ಮೆಸ್ಕಾಂ ಶೇ.19, ಚೆಸ್ಕಾಂ ಶೇ.18, ಹೆಸ್ಕಾಂ ಶೇ.19, ಜೆಸ್ಕಾಂ ಶೇ.26ರಷ್ಟು ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಕೆಇಆರ್‍ಸಿ ಅಧ್ಯಕ್ಷ ಶಂಕರ್‍ಲಿಂಗೇಗೌಡ ಇಂದು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದ್ಯುತ್ ದರ ಇಂದಿನಿಂದಲೇ ಜಾರಿಯಾಗಲಿದ್ದು, ಏ.1ರಿಂದ ಪೂರ್ವಾನ್ವಯವಾಗಲಿದೆ. ಸರಾಸರಿ ಪ್ರತಿ ಯೂನಿಟ್‍ಗೆ 25ರಿಂದ 65 ಪೈಸೆಯಷ್ಟು ಹೆಚ್ಚಳವಾಗಲಿದೆ. ಸರಾಸರಿ ಶೇ.5.93ರಷ್ಟು ವಿದ್ಯುತ್ ದರ ಪರಿಷ್ಕರಿಸಲಾಗಿದೆ ಎಂದರು. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‍ಗೆ 82 ಪೈಸೆ, ಚೆಸ್ಕಾಂ -113 ಪೈಸೆ, ಜೆಸ್ಕಾಂ-162 ಪೈಸೆ ಹಾಗೂ ಹೆಸ್ಕಾಂ ವ್ಯಾಪ್ತಿಯಲ್ಲಿ 123 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Comments