ಚುನಾವಣಾ ಅಧಿಕಾರಿಗಳ ಮೇಲೆ ಡೆಡ್ಲಿ ಸೋಮ ಸಿಡಿಮಿಡಿಗೊಂಡಿದ್ಯಾಕೆ?
ರಾಜ್ಯದಲ್ಲಿ ಎಲ್ಲರೂ ಕೂಡ ಮತದಾನದ ಹಕ್ಕನ್ನು ಚಲಾಯಿಸಿ ಯಾರಾಗ್ತಾರೆ ಮುಂದಿನ ಸಿ.ಎಂ ಎಂದು ಕಾಯುತ್ತಿದ್ದಾರೆ. ಇನ್ನೂ ಕೆಲವರು ಮತದಾನ ಮಾಡಲು ಸಾಧ್ಯವಾಗದೆ ಹಿಂದಿರುಗಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ಸ್ ಎಲ್ಲರೂ ಕೂಡ ಮತ ಹಾಕಿರುವ ಖುಷಿಯಲ್ಲಿದ್ದಾರೆ. ನಟ ಆದಿತ್ಯ ಮಾತ್ರ ಚುನಾವಣಾ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ನಟ ಆದಿತ್ಯ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಮುನ್ನ ಒಂದು ಮಾಹಿತಿ ಕೂಡ ನೀಡದೆ ನನ್ನ ಹೆಸರು ತೆಗೆದು ಮತ ಹಾಕಲು ಹೋದವರನ್ನು ವಾಪಸ್ ಬರುವಂತೆ ಮಾಡಿರೋದು ಆದಿತ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನಟ ಆದಿತ್ಯ ಅವರು ತಮ್ಮ ಟ್ವೀಟರ್ ನಲ್ಲಿ,' ಚುನಾವಣಾಧಿಕಾರಿಗಳು ಏನು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ಮತದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದು ಮತಹಾಕುವ ನನ್ನ ಹಕ್ಕನ್ನು ತೆಗೆದು ಹಾಕಿದ್ದಾರೆ. ಹೀಗೆ ಯಾವುದೇ ಮಾಹಿತಿ ನೀಡದೆ ಹೆಸರನ್ನು ತೆಗೆದು ಹಾಕಿ ಮತದಾನದ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ ಎಂದು ಪೋಸ್ಟ್ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Comments