ಮತಗಟ್ಟೆಯಲ್ಲೆ ಹೃದಯಾಘಾತದಿಂದ ಇಬ್ಬರ ಸಾವು..!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇಂದು ತಮ್ಮ ಹಕ್ಕುನ್ನು ಚಲಾಯಿಸಲು ಹೋಗಿದ್ದ ಇಬ್ಬರು ಮತದಾರರು ಮತಗಟ್ಟೆಯಲ್ಲೇ ಹೃದಯಾಘಾತದಿಂದ ನಿಧನರಾಗಿರುವಂತಹ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 70 ವರ್ಷದ ಅಣ್ಣಿ ಆಚಾರ್ಯ ಎಂಬುವವರು ಮತ ಹಾಕಿ ವಾಪಸ್ ಬರುವಾಗ ಮತಗಟ್ಟೆಯಲ್ಲಿ ಕುಸಿದು ಬಿದ್ದಿದ್ದು, ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅದೇ ರೀತಿಯಾಗಿ ಪಾಂಡವಪುರ ವಿಧಾನಸಭಾ ಕ್ಷೇತ್ರದ ವಡ್ಡರಹಳ್ಳಿಯಲ್ಲಿಯೂ ಕೂಡ ಮತಗಟ್ಟಿಯಲ್ಲಿ 55 ವರ್ಷದ ತಮ್ಮೇಗೌಡ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
Comments