ರಾಜ್ಯದ ಉದ್ದಾರಕ್ಕಾಗಿ 105 ನೇ ವಯಸ್ಸಿನಲ್ಲಿಯೂ ಮತ ಚಲಾಯಿಸಿದ ವೃದ್ದೆ!

12 May 2018 5:44 PM | General
435 Report

ಮತದಾನ ಎನ್ನುವುದು ಎಲ್ಲರ ಹಕ್ಕು. ಎಂತಹ ಸಂದರ್ಭ ಇದ್ದರೂ ಕೂಡ ಬಂದು ತಮ್ಮ ಮತವನ್ನು ಚಲಾಯಿಸಿ ತಮಗೆ ಇಷ್ಟವಾದ ಅಭ್ಯರ್ಥಿಯನ್ನು ಆರಿಸುತ್ತಾರೆ.

ಅದೇ ರೀತಿಯಾಗಿ ಪುತ್ತೂರಿನ ಅರಿಯಡ್ಕ ನಿವಾಸಿಗಳಾದ ಐಶುಮ್ಮ ಅವರಿಗೆ 105 ವರ್ಷ ಆದರೂ ಮತದಾನ ಮಾಡಬೇಕು ಮತ್ತು ನನಗಿರುವ ಹಕ್ಕನ್ನು ಚಲಾಯಿಸಲೇ ಬೇಕು, ರಾಜ್ಯವನ್ನು ಉದ್ಧರಿಸಬೇಕು ಎನ್ನುವ ಆಲೋಚನೆಯಲ್ಲಿ ತಮ್ಮ ಮಗನೊಂದಿಗೆ ಅರಿಯಡ್ಕ ಮತಗಟ್ಟೆಗೆ ಆಗಮಿಸಿ ಮತವನ್ನು ಚಲಾಯಿಸಿದ್ದಾರೆ. ಅವರ ಹುಮ್ಮಸ್ಸು ಜನರನ್ನು ಮತಗಟ್ಟೆಗೆ ಕಡೆಗೆ ಸೆಳೆಯುವಂತಾಯಿತು. ಇಂತಹವರು ಯುವ ಮತದಾರರಿಗೆ ಸ್ಫೂರ್ತಿ ಎನ್ನಬಹುದು.

Edited By

Manjula M

Reported By

Manjula M

Comments