ಮತ ಚಲಾಯಿಸಲು ಬಂದ ಮಧುಮಗಳು..!

ಮತದಾನ ನಮ್ಮ ಹಕ್ಕು ಎಲ್ಲರೂ ಮತ ಚಲಾಯಿಸಿ ಎಂದು ಇಷ್ಟು ದಿನ ಹೇಳುತ್ತಾ ಬರುತ್ತಿದ್ದರು.ಆದರೆ ಇಂದು ಎಲ್ಲರು ಕೂಡ ತಮ್ಮ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಆದರೆ ಮಡಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ತಮ್ಮ ಮತವನ್ನು ಚಲಾಯಿಸಿದ್ದು ವಿಶೇಷವಾಗಿತ್ತು.
ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಮತಗಟ್ಟಿ ಸಂಖ್ಯೆ 131 ಯಲ್ಲಿ ಸ್ಮಿತಾ ಎಂಬುವವರು ತಮ್ಮ ಮತ ಚಲಾಯಿಸಿದ್ದಾರೆ. ಮದುಮಗಳಂತೆ ಅಲಂಕರಿಸಿದ ಮತಗಟ್ಟೆಗೆ ಆಗಮಿಸಿದ ಸ್ಮಿತಾ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸ್ಮಿತಾ ಇಂದು ಗೌಡ ಸಮಾಜದಲ್ಲಿ ಮದುವೆ ಆಗುತ್ತಿದ್ದು, ಮಡಿಕೇರಿಯ ಮೂವತೊಕ್ಕಲಿನ ಬಿಎಂಟಿಸಿ ಸಿಬ್ಬಂದಿ ಆದ ಪ್ರವೀಣ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ..ಮದುವೆಯ ಸಂದರ್ಭದಲ್ಲೂ ಮತ ಚಲಾಯಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿತ್ತು.
Comments