ನಾಳೆಯಿಂದ ಒಂದು ವಾರ ಇಂದಿರಾ ಕ್ಯಾಂಟಿನ್ ಕ್ಲೋಸ್..!
ಇಷ್ಟು ದಿನ ಕಾಯುತ್ತಿದ್ದ ರಾಜ್ಯ ವಿಧಾನಸಭೆ ಚುನಾವಣೆ ನಾಳೆ ನಡೆಯಲಿದ್ದು, ಚುನಾವಣಾ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವುದಿಲ್ಲ.
ಇಂದಿರಾ ಕ್ಯಾಂಟೀನ್ ನ ಊಟ, ತಿಂಡಿ ಚುನಾವಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಪೂರೈಕೆಯಾಗಲಿದೆ. ಹಾಗಾಗಿ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟಿನ್ ಸೇವೆ ಇರುವುದಿಲ್ಲ. ಇಂದಿನಿಂದಲೇ ಬೂತ್'ಗಳಿಗೆ ಇಂದಿರಾ ಕ್ಯಾಂಟೀನ್ ಊಟ ಸರಬರಾಜು ಆಗುತ್ತದೆ. ಇನ್ನು ಒಂದು ವಾರ ಕ್ಯಾಂಟೀನ್ ಊಟ, ತಿಂಡಿ ಸೇವೆ ಇರುವುದಿಲ್ಲ. ಹಾಗಾಗಿ ದಿನ ಇಂದಿರಾ ಕ್ಯಾಂಟಿನ್ ನಲ್ಲೆ ಊಟ ಮಾಡುವವರು ಇನ್ನೂ ಒಂದು ವಾರ ಮನೆಯಲ್ಲೆ ಅಥವಾ ಬೇರೆ ಹೋಟೆಲ್ ನೋಡಿಕೊಳ್ಳುವುದು ಉತ್ತಮ.
Comments