ಎಸ್.ಎಸ್.ಎಲ್.ಸಿ. ಅನುತ್ತೀರ್ಣರಾದವರಿಗೆ ಇಲ್ಲಿದೆ ಸಿಹಿ ಸುದ್ದಿ..!
ಕಳೆದ ದಿನಗಳ ಹಿಂದಷ್ಟೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಹೇಳಲಾಗುವ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಿದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಫೇಲಾದವರಿಗೆ ಮತ್ತೊಮ್ಮೆ ಪೂರಕ ಪರೀಕ್ಷೆಗಳು ನಡೆಯಲಿದ್ದು, ಇದರೊಂದಿಗೆ ಮತ್ತೊಮ್ಮೆ ಶಾಲೆಗೆ ಹೋಗುವ ಅವಕಾಶವನ್ನು ಶಿಕ್ಷಣ ಇಲಾಖೆಯು ಕಲ್ಪಿಸಿದೆ. ಫೇಲಾದ ವಿದ್ಯಾರ್ಥಿಗಳು ಮತ್ತೆ 10 ನೇ ತರಗತಿಗೆ ಪ್ರವೇಶ ಪಡೆದು, ಶಾಲೆಗೆ ಹೋಗಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪ್ರೌಢಶಿಕ್ಷಣ ಇಲಾಖೆ, ಎಸ್.ಎಸ್.ಎಲ್.ಸಿ. ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಪಾಠ ಮಾಡಿ ಪೂರಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅವಕಾಶವನ್ನು ನೀಡಿದೆ. ಪೂರಕ ಪರೀಕ್ಷೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳಬೇಕು.
Comments