ಯಾವ ನೀರು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?
ನಮ್ಮ ದೇಹಕ್ಕೆ ಆರೋಗ್ಯ ಅನ್ನೋದು ತುಂಬಾ ಮುಖ್ಯ..ಒಮ್ಮೆ ಆರೋಗ್ಯ ಕೈ ಕೊಡ್ತು ಅಂದ್ರೆ ಮುಗೀತು.. ಅದನ್ನ ಸರಿ ಮಾಡಿಕೊಳ್ಳುವಷ್ಟರಲ್ಲಿ ತುಂಬಾ ಸಮಯ ಕಳೆದೇ ಹೋಗುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಬಗ್ಗೆ ನಾವು ಒಂದಿಷ್ಟು ಕಾಳಜಿಯನ್ನು ಮಾಡಲೇಬೇಕು.
ನಮ್ಮ ದೇಹದಲ್ಲಿ ಶೇ 75 ರಷ್ಟು ಭಾಗ ಣಿರು ಇರುವುದರಿಂದ ನಮ್ಮ ದೇಹಕ್ಕೆ ನೀರಿನ ಅಗತ್ಯತೆ ತುಂಬಾ ಇದೆ. ಹಾಗಾಗಿಯೇ ಮಾನವನ ದೇಹಕ್ಕೆ ನೀರು ತುಂಬಾ ಅಗತ್ಯ. ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಕೂಡ ಸುಗಮವಾಗಿ ಆಗುತ್ತದೆ. ಕೆಲವೊಂದು ಆಹಾರದಲ್ಲೂ ಕೂಡ ನೀರಿನ ಅಂಶ ಹೆಚ್ಚಾಗಿರುತ್ತದೆ. ಅಂತಹ ಆಹಾರಗಳನ್ನು ಸೇವಿಸಿದರೆ ನಮ್ಮ ಆರೋಗ್ಯ ಉತ್ತಮ ರೀತಿಯಲ್ಲಿ ಇರುತ್ತದೆ. ನೀರನ್ನು ಹೆಚ್ಚಾಗಿ ಕುಡಿಯಬೇಕು ಅಂದಾಗ ನಮ್ಮ ತಲೆಯಲ್ಲಿ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ. ಬಿಸಿ ನೀರು ಕುಡಿಬೇಕೋ ಅಥವಾ ತಣ್ಣೀರು ಕುಡಿಯಬೇಕೋ ಎಂದು… ಯಾವುದು ನಮ್ಮ ದೇಹಕ್ಕೆ ಸೂಕ್ತ ಎಂಬುದನ್ನು ತಿಳಿಯಬೇಕು. ಕೆಲವರು ಬಿಸಿ ನೀರು ಒಳ್ಳೆಯದು ಅಂತಾರೆ .. ಮತ್ತೆ ಕೆಲವರು ತಣ್ಣೀರು ಅಂತಾರೆ.. ಹಾಗಾದ್ರೆ ಯಾವುದು ಸೇಪ್
ಬಿಸಿ ನೀರಿನ ಪ್ರಯೋಜನಗಳು
ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
ಬಿಸಿಲಿನ ತಾಪಮಾನದಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.
ಬಿಸಿ ನೀರು ಮಲಬದ್ಧತೆ ನಿವಾರಣೆ ಮಾಡಿ ಕರುಳಿಗೆ ರಕ್ತ ಪರಿಚಲನೆ ಹೆಚ್ಚಿಸುವುದು.
ಬಿಸಿ ನೀರನ್ನು ಸೇವಿಸುವುದರಿಂದ ಪಿತ್ತ ಕಡಿಮೆಯಾಗುವುದು ಮತ್ತು ಇದು ಮೊಡವೆ ಹಾಗೂ ಇತರ ಹಲವು ಚರ್ಮದ ಸಮಸ್ಯೆ ನಿವಾರಿಸುವುದು
ಶ್ವಾಸಕೋಶದಲ್ಲಿರುವಂತಹ ಕಫವನ್ನು ತೆಗೆದುಹಾಕುವುದು
ತಣ್ಣೀರಿನ ಪ್ರಯೋಜನಗಳು
ಬೇಸಿಗೆಯ ವೇಳೆ ಹೊರಗಡೆ ಹೋದಾಗ ಹೆಚ್ಚು ತಣ್ಣೀರನ್ನು ಕುಡಿಯಿರಿ.
ಇದರಿಂದ ತಣ್ಣೀರು ಕುಡಿಯುವುದು ಮತ್ತು ಅದರಿಂದ ಸ್ನಾನ ಮಾಡಿದರೆ ಕೊಬ್ಬು ಕರಗಲು ಸಹಕಾರಿ.
ಆಯುರ್ವೇದ ಮತ್ತು ಚೀನಾದ ವೈದ್ಯಕೀಯ ಶಾಸ್ತ್ರದ ಪ್ರಕಾರ ತಣ್ಣೀರು ಸ್ನಾಯುಗಳ ಸಂಕೋಚನ ಉಂಟು ಮಾಡುತ್ತದೆ.
Comments