ಅಮೃತ ವರ್ಷಿಣಿಯ ಅಮೃತ ಇದೀಗ ದೆವ್ವ ಆಗಲಿದ್ದಾರೆ..!

ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದಂತಹ ಅಮೃತ ವರ್ಷಿಣಿ ಧಾರವಾಹಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಚಿಕ್ಕ ಮಕ್ಕಳು ಕೂಡ ಅಮೃತ ವರ್ಷಿಣಿ ಧಾರವಾಹಿಯ ಬಗ್ಗೆ ಮಾತನಾಡುತ್ತಿದ್ದರು. ಸಾಕಷ್ಟು ವರ್ಷಗಳಿಂದ ಅಮೃತವರ್ಷಿಣಿ ಧಾರವಾಹಿ ಪ್ರಸಾರವಾಗುತ್ತಿತ್ತು. ಅದರಲ್ಲಿರುವ ಅಮೃತ ಎನ್ನುವ ಪಾತ್ರ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಅಮೃತ ಅಂತಾನೆ ಫೇಮನ್ ಆಗಿದ್ದ ರಜನಿ ಇದೀಗ ಜೀ ಕನ್ನಡದ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಜಿನಿ ಇದೀಗ ಎಲ್ಲರನ್ನೂ ಬೆಚ್ಚಿ ಬೀಳಿಸಲು ಬರುತ್ತಿದ್ದಾರೆ. ಎಸ್.. ರಜಿನಿ ಇದೀಗ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಹೊಸ ಧಾರವಾಹಿ ಶೀಘ್ರದಲ್ಲೆ ಶುರುವಾಗಲಿದೆ. ತಾಯಿಯ ವಿರುದ್ದವೆ ತಿರುಗಿ ಬೀಳುವ ಆತ್ಮದ ಕಥಾ ಹಂದರವನ್ನು ಈ ಧಾರವಾಹಿಯಲ್ಲಿ ನೋಡಬಹುದು.
Comments