ಮೇ 14ರವರೆಗೂ ರಾಜ್ಯದಲ್ಲಿ ಮುಂದುವರೆಯಲಿರುವ ಮಳೆ

ಬೇಸಿಗೆ ಅಂದರೆ ಸಾಕು ಜನ ಉರಿದು ಬಿಳ್ತಾರೆ.. ಈ ಬೇಸಿಗೆಯಲ್ಲಿ ಹೊರಗಡೆ ಹೋಗೋದು ಅಷ್ಟು ಸುಲಭದ ಮಾತಲ್ಲ.ಆದರೆ ಬಿಸಿಲಿನಿಂದ ಒಣಗಿದ ಭೂಮಿಗೆ ಮಳೆರಾಯ ತಂಪನ್ನು ಎರೆಯುತ್ತಿದ್ದಾನೆ. ಬೇಸಿಗೆಯಲ್ಲೂ ಕೂಡ ಮಳೆರಾಯ ಕರುಣೆ ತೋರಿದ್ದಾನೆ.
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆ ಹಾಗೂ ಕರಾವಳಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿಯೂ ಕೂಡ ಮೇ 14ರವರೆಗೂ ಮಳೆ ಬರುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ಒದಗಿಸಿದೆ. ಕೆಲ ಪ್ರದೇಶಗಳಲ್ಲಿ ಮೇ 10,12 ಮತ್ತು 14 ರಂದು ಬಿರುಗಾಳಿ, ಗುಡುಗು ಸಿಡಿಲುಸಹಿತ ಮಳೆಯಬ್ಬರದ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ. ಹೊರಗಡೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.. ಮಳೆರಾಯ ಯಾವಾಗ ಬೇಕಾದರೂ ಕೂಡ ಬರಬಹುದು.
Comments