ಸೇನಾ ಸಮವಸ್ತ್ರ ಹರಾಜಿನ ಹಿನ್ನಲೆ: ಅಕ್ಷಯ್ ಗೆ ಸಂಕಷ್ಟ
ಖ್ಯಾತ ಬಾಲಿವುಡ್ ನಟನಾದ ಅಕ್ಷಯ್ ಕುಮಾರ್, ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳುವ ಸಲುವಾಗಿ 'ರುಸ್ತುಂ' ಚಿತ್ರದಲ್ಲಿ ಧರಿಸಿದ್ದಂತಹ ಸೇನಾ ಸಮವಸ್ತ್ರವನ್ನು ಹರಾಜು ಮಾಡಲು ಮುಂದಾಗಿದ್ದು ನಿಮಗೆಲ್ಲಾ ತಿಳಿದೆ ಇದೆ.ಆದರೆ ಇದು ಈಗ ವಿವಾದಕ್ಕೆ ಕಾರಣವಾಗಿದೆಯಲ್ಲದೇ ಅಕ್ಷಯ್ ಕುಮಾರ್ ಗೆ ಹರಾಜು ಹಿಂಪಡೆಯುವಂತೆ ಸೂಚಿಸಿ ಲೀಗಲ್ ನೋಟೀಸ್ ನೀಡಲಾಗಿದೆ.
ನೌಕಾದಳದ ಅಧಿಕಾರಿಯ ಪಾತ್ರದಲ್ಲಿ 'ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಬಾಕ್ಸಾಫೀಸ್ ನಲ್ಲಿಯೂ ಕೂಡ ಈ ಚಿತ್ರ ಭಾರೀ ಗಳಿಕೆ ಮಾಡಿತಾದರೂ ಚಿತ್ರದ ಕುರಿತು ಸೇನಾಧಿಕಾರಿಗಳಿಂದಲೇ ವಿರೋಧವು ವ್ಯಕ್ತವಾಗಿತ್ತು. ಈ ವಿಷಯ ತಣ್ಣಗಾದ ಬಳಿಕ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ, ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳಲು ಅಕ್ಷಯ್ ಕುಮಾರ್ ಧರಿಸಿದ್ದ ಸಮವಸ್ತ್ರವನ್ನು ಹರಾಜು ಮಾಡಲಾಗುವುದು ಎಂದು ಪ್ರಕಟಿಸಿದ್ದು, ಪತ್ನಿಯ ಕಾರ್ಯಕ್ಕೆ ಅಕ್ಷಯ್ ಕುಮಾರ್ ಕೂಡಾ ಸಾಥ್ ಕೊಟ್ಟಿದ್ದರು. ಆದರೆ ಇದೀಗ ಈ ಹರಾಜಿಗೆ ವಿರೋಧ ವ್ಯಕ್ತವಾಗಿದ್ದು, ಅಕ್ಷಯ್ ಕುಮಾರ್ ಗೆ ಈಗ ಲೀಗಲ್ ನೋಟೀಸ್ ಅನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ ಪಠಾಣ್ ಕೋಟ್ ಸೇನಾ ನೆಲೆ ಮೇಲೆ ಉಗ್ರರು ಸೇನಾ ಸಮವಸ್ತ್ರ ಧರಿಸಿ ದಾಳಿ ನಡೆಸಿದ ಬಳಿಕ ದೇಶಾದ್ಯಂತ ಸೇನಾ ಸಮವಸ್ತ್ರ ಧರಿಸುವುದು ಹಾಗೂ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ ಎಂಬ ಸಂಗತಿಯನ್ನೂ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಹಾಗಾಗಿ ಅಕ್ಷಯ್ ಕುಮಾರ್ ಕೈಗೊಳ್ಳಬೇಕು ಅಂದುಕೊಂಡಿದ್ದ ಕಾರ್ಯಕ್ಕೆ ಮೊದಲ ಯತ್ನವೆ ವಿಫಲವಾಗಿದೆ.
Comments