ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೇ ಸಚಿವ

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಲಿಕಾರ್ಮಿಕನ ಪುತ್ರ ರೈಲ್ವೇ ನಿಲ್ದಾಣದ ಉಚಿತ ವೈಫೈ ಸೇವೆಯ ಮೂಲಕ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನು ಪಡೆದು ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು ಇತ್ತಿಚಿಗೆ ಭಾರೀ ಸುದ್ದಿಯಾಗಿರುವುದು ಎಲ್ಲರಿಗೂ ತಿಳಿದೆ ಇದೆ.
ಇತ್ತಿಚಿಗೆ ಮಾಡಿದ ಭಾಷಣದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಈ ವಿಷಯವನ್ನು ಕೂಡ ಪ್ರಸ್ತಾಪಿಸಿರುವ ರೈಲ್ವೆ ಸಚಿವರು ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ಒದಗಿಸುವುದಾಗಿ ಭರವಸೆನ್ನು ನೀಡಿದ್ದಾರೆ. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಕೈಗಾರಿಕೋದ್ಯಮಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಪಿಯೂಷ್ ಗೋಯಲ್ ಅವರು ಕೇರಳದಲ್ಲಿನ ಕಾರ್ಮಿಕನ ಮಗ ರೈಲು ನಿಲ್ದಾಣದ ಉಚಿತ ವೈಫೈ ಸೌಲಭ್ಯವನ್ನು ಬಳಸಿಕೊಂಡೇ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ರೈಲುಗಳಲ್ಲಿ ಬಡ, ಮಧ್ಯಮ ವರ್ಗದವರು ಹೆಚ್ಚಾಗಿ ಪ್ರಯಾಣಿಸುತ್ತಾರೆ. ಇಂಟರ್ ನೆಟ್ ಸೌಲಭ್ಯ ಎಲ್ಲರಿಗೂ ತಲುಪಬೇಕಿದೆ ಎಂದು ಆ ಸಂದರ್ಭದಲ್ಲಿ ತಿಳಿಸಿದರು. ಅನೇಕ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಉಚಿತವಾಗಿ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮುಂಬರುವ 1 ವರ್ಷದಲ್ಲಿ ದೇಶಾದ್ಯಂತ 7,000 ರೈಲು ನಿಲ್ದಾಣಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.
Comments