ಚುನಾವಣೆಯ ಹಿನ್ನಲೆ: ಬ್ಯಾಂಕ್ ಕೆಲಸಗಳಿಗೆ ಸಾಲು ಸಾಲು ರಜೆ..!

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆಯನ್ನು ನೀಡಿದ್ದಾರೆ. ನಿಮ್ಮ ಯಾವುದೇ ಬ್ಯಾಂಕ್ ನ ಕೆಲಸ ಕಾರ್ಯಗಳು ಇದ್ದರೆ ಅವುಗಳನ್ನು ಇಂದೇ ಮುಗಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು.
ರಾಜ್ಯ ವಿಧಾನಸಭೆ ಚುನಾವಣೆಯು ಮೇ 12 ರಂದು ನಡೆಯಲಿದೆ. ವಿಧಾನ ಸಭಾ ಚುನಾವಣಾ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿಯನ್ನು ಬಳಸಿಕೊಳ್ಳುವುದರಿಂದ ಮೇ 11, 12 ರಂದು ರಜೆ ಬ್ಯಾಂಕ್ ಗಳಿಗೆ ರಜೆಯನ್ನು ನೀಡಲಾಗುತ್ತದೆ. ಮೇ 13 ರಂದು ಭಾನುವಾರ ರಜೆ ಇದೆ. ಹೀಗಾಗಿ 3 ದಿನಗಳ ಕಾಲ ಸಾಲು ಸಾಲು ರಜೆ ಇರುವುದರಿಂದ ನಿಮ್ಮ ಬ್ಯಾಂಕ್ ನ ಎಲ್ಲಾ ಕೆಲಸಗಳಿಗೂ ತೊಂದರೆಯಾಗಬಹುದು. ಮೇ 12 ರಂದು 2 ನೇ ಶನಿವಾರ ಇರುವುದರಿಂದ ರಜೆ ಇದೆ. ಅಂದು ಮತದಾನ ನಡೆಯಲಿರುವುದರಿಂದ ಸಾರ್ವತ್ರಿಕ ರಜೆಯನ್ನು ನೀಡಲಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಎದುರಾಗಬಹುದು. ಹಾಗಾಗಿ ನಿಮ್ಮೆಲ್ಲ ಬ್ಯಾಂಕ್ ಕೆಲಸಗಳನ್ನು ಇಂದೆ ಪೂರ್ಣಗೊಳಿಸಿಕೊಳ್ಳಿ.
Comments