ತಿಂಗಳು ಪೂರ್ತಿ ಅಲುಗಾಡದೆ ನಿದ್ದೆ ಮಾಡೋ ಗ್ರಾಮಸ್ಥರ ಇಷ್ಟ್ರಸ್ಟಿಂಗ್ ಸ್ಟೋರಿ..!

ನಿದ್ದೆ ಮಾಡೋ ಪ್ರಿಯರು ಖಂಡಿತವಾಗ್ಲೂ ಈ ಸ್ಟೋರಿ ಓದಲೇಬೇಕು. ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ 7-8 ಗಂಟೆಗಳ ಕಾಲ ನಿದ್ದೆ ಬೇಕಾಗುತ್ತೆ. ನಿದ್ದೆ ಪ್ರಿಯರು 10 ಗಂಟೆಗಳ ಕಾಲ ಮಲಗ್ತಾರೆ. ಆದ್ರೆ ತಿಂಗಳು ಪೂರ್ತಿ ಮಲಗಿ ನಿದ್ರೆ ರೋಗಕ್ಕೆ ತುತ್ತಾದ ಗ್ರಾಮವೊಂದರ ಜನರ ಕಥೆ.
ಅಂತಹ ಗ್ರಾಮ ಇದೆಯಾ ಅಂತ ನಿಮಗೆ ಆಶ್ಚರ್ಯ ಆಗ್ತಿರಬಹುದು. ಹೌದು ಉತ್ತರ ಕಜಕಿಸ್ಥಾನದ ಕಲಾಚಿ ಗ್ರಾಮದ ಜನರು ವಿಚಿತ್ರವಾದ ನಿದ್ರೆ ರೋಗಕ್ಕೆ ತುತ್ತಾಗಿ ತಿಂಗಳಾದ್ರು ಮೇಲೆ ಏಳಲ್ಲ. ಕಲಾಚಿ ಗ್ರಾಮದ ಜನರು ಯಾವುದೇ ಸಮಯ ಅಥವಾ ಸಂದರ್ಭದಲ್ಲಿ ಏನಾದ್ರು ಕೆಲಸ ಮಾಡ್ತಿರೋ ಸಮಯದಲ್ಲಿ ಅಚಾನಕ್ ಆಗಿ ನಿದ್ರೆ ಮಾಡ್ತಾರೆ. ಇವರ ನಿದ್ರೆ ಕೆಲವು ಗಂಟೆಗಳ ವರೆಗೆ ಇರಲ್ಲ. ತಿಂಗಳ ವರೆಗೂ ಮಲಗೇ ಇರ್ತಾರೆ. ಹಾಗಾಗಿ ಈ ಗ್ರಾಮವನ್ನ ಸ್ಲೀಪಿ ಹಾಲೋ ಅಂತ ಕರೆಯಲಾಗುತ್ತೆ. 2010ರ ವರೆಗೆ ಈ ಗ್ರಾಮದಲ್ಲಿ ನಿದ್ರೆ ರೋಗ ಇರಲಿಲ್ಲ. ಪ್ರತಿ ವರ್ಷ ಶೇಕಡಾ 15ರಷ್ಟು ಜನರು ಈ ರೋಗಕ್ಕೆ ಗುರಿಯಾಗುತ್ತಿದ್ದಾರೆ. ಈ ಖಾಯಿಲೆಗೆ ಒಳಗಾದ ಜನರಿಗೆ ಯಾವಾಗ ಬೇಕಾದ್ರು, ಯಾವ ಸಮಯದಲ್ಲಿ ಬೇಕಾದ್ರು ನಿದ್ರೆ ಬರುತ್ತೆ. ಹೀಗೆ ನಿದ್ರೆಗೆ ಜಾರಿದವರು ತಿಂಗಳವರೆಗೂ ನಿದ್ರೆಯಲ್ಲೇ ಇರ್ತಾರೆ.
Comments