ವಿವಾದಕ್ಕೀಡಾಗಿದೆ ರಾಷ್ಟ್ರಪಕ್ಷಿಯ ಅಂತ್ಯಕ್ರಿಯೆ!

ದೆಹಲಿ ಹೈಕೋರ್ಟ್‌ನ ಬಳಿ ಇರುವ ರಸ್ತೆಯೊಂದರಲ್ಲಿ ಅಪಘಾತಕ್ಕೆ ಒಳಗಾಗಿದ್ದ ನವಿಲನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.ಆದರೆ, ಅದಕ್ಕೆ ಆಗಿದ್ದ ಗಾಯದಿಂದಾಗಿ ನವಿಲು ಕಳೆದ ಶುಕ್ರವಾರ ಸಾವನ್ನಪ್ಪಿತ್ತು.
ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾದ ಕಾರಣಕ್ಕೆ ನಿಯಮಾವಳಿಯಂತೆ ಪೊಲೀಸರು ಸರ್ಕಾರಿ ಗೌರವಗಳೊಂದಿಗೆ ತ್ರಿವರ್ಣ ಧ್ವಜ ಹೊದಿಸಿ ಮರದ ಪೆಟ್ಟಿಗೆಯಲ್ಲಿಟ್ಟು ಅಂತ್ಯಕ್ರಿಯೆಯನ್ನು ಮಾಡಿದ್ದರು.ಅಲ್ಲಿನ ಸೇನಾ ಸಿಬ್ಬಂದಿ ಅಥವಾ ಗಣ್ಯವ್ಯಕ್ತಿಗಳು ಮೃತಪಟ್ಟ ವೇಳೆಯಲ್ಲಿ ಮಾತ್ರ ತ್ರಿವರ್ಣ ಧ್ವಜ ಹೊದಿಸಿ ಅಂತ್ಯಕ್ರಿಯೆ ನಡೆಸುವ ಪರಿಪಾಠವಿದೆ. ಆದರೆ, ದೆಹಲಿ ಪೊಲೀಸರು ಮೃತ ನವಿಲಿಗೆ ತ್ರಿವರ್ಣ ಧ್ವಜ ಹೊದಿಸಿ ಅಂತ್ಯ ಕ್ರಿಯೆ ನೆರವೇರಿಸಿರುವುದು ಇದೀಗ ವಿವಾದಕ್ಕೆ ಗುರಿಯಾಗಿದೆ.
Comments