ಒಂದೇ ದಿನ ಎಕ್ಸಾಂ ಮತ್ತು ಮದುವೆ..! ಮದುವೆಯ ಉಡುಪಿನಲ್ಲೆ ಪರೀಕ್ಷೆ ಬರೆದ ಮಧುಮಗಳು

ವಿದ್ಯಾರ್ಥಿಗಳಿಗೆ ಪರೀಕ್ಷೆ ಎನ್ನುವುದು ಎಷ್ಟು ಮುಖ್ಯ ಎನ್ನುವುದಕ್ಕೆ ಇದೆ ಸಾಕ್ಷಿ ಅನಿಸುತ್ತದೆ. ಕೆಆರ್ ಪೇಟೆಯಲ್ಲಿ ಮದುವೆ ದಿನದಂದೆ ಮದುಮಗಳು ಎಕ್ಸಾಂ ಬರೆದು ಆನಂತರ ತಾಳಿ ಕಟ್ಟಿಸಿಕೊಂಡಿರುವ ಘಟನೆ ನಡೆದಿದೆ.
ಕೆ.ಆರ್ ಪೇಟೆಯ ಕಲ್ಪತರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ ಕಾವ್ಯಾ ಅವರ ಮದುವೆ ಇಂದು ಲೋಹಿತ್ ಅವರ ಜೊತೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ 11 ಗಂಟೆಯಿಂದ 11:45 ರ ವರೆಗೆ ಮದುವೆ ಮುಹೂರ್ತ ನಿಶ್ಚಯವಾಗಿತ್ತು. ಆದರೆ ಇಂದು ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಕೂಡ ಇತ್ತು. ಮದುವೆ ಇರುವ ಕಾರಣಕ್ಕೆ ಪರೀಕ್ಷೆಗೆ ತೊಂದರೆಯಾಗಬಾರದು ಎಂದು ತೀರ್ಮಾನಿಸಿದ ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರು ಕಾವ್ಯಾಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ. ಮದುಮಗಳ ಅಲಂಕಾರದಲ್ಲಿಯೇ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆಯನ್ನು ಕೂಡ ಬರೆದಿದ್ದಾರೆ. ಕಾವ್ಯಾ ಮುಹೂರ್ತದ ವೇಳೆಗೆ ಪರೀಕ್ಷಾ ಕೊಠಡಿಯಿಂದ ಹೊರಬಂದಿದ್ದು ತಕ್ಷಣವೇ ಕಾವ್ಯಾ ಅವರನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿ ಸಂಪ್ರದಾಯ ಬದ್ಧವಾಗಿ ವಿವಾಹ ಕಾರ್ಯ ನೆರವೇರಿಸಿದ್ದಾರೆ.
Comments