ಕಾಸ್ಟಿಂಗ್ ಕೌಚ್ ಬಗ್ಗೆ ಸಮಂತಾ ಹೇಳಿದ್ದೇನು?

ಕಳೆದ ಒಂದು ತಿಂಗಳಿಂದಲೂ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಕೆಲವು ನಟಿಯರು ತಮ್ಮ ತಮ್ಮ ಅಭಿಪ್ರಾಯ, ಅನುಭವವನ್ನು ಹೇಳಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಸೌತ್ ಸಿನಿಮಾರಂಗದ ಬಹು ಬೇಡಿಕೆಯ ನಟಿಯಾದ ಸಮಂತಾ ಅಕ್ಕಿನೇನಿ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಸಮಂತಾ ಅಕ್ಕಿನೇನಿ ಸೌತ್ ಸಿನಿಮಾರಂಗದ ಮಿನುಗುತಾರೆ ಎಂದು ಹೇಳಬಹುದು.ಸಮಂತಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಎಂದರೆ ತಪ್ಪಾಗುವುದಿಲ್ಲ.. ರನ್ನನ ಜತೆ ತೆಲುಗಿನ ಈಗ ಸಿನಿಮಾದಲ್ಲಿ ಮಿಂಚಿದ್ದರು. 8 ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿ ಇದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟಿ ಈ ಸಮಂತಾ. ಕಾಸ್ಟಿಂಗ್ ಕೌಚ್ ಅನ್ನೋದು ಸಿನಿಮಾರಂಗ ಮಾತ್ರವಲ್ಲಾ ಉದ್ಯಮದಲ್ಲೂ ಕೂಡ ಇದೆ. ಉದ್ಯಮದ ಒಂದು ಪಾರ್ಟ್ ಆಗಿ ಬಿಟ್ಟಿದೆ. ನಾನು ಎಂಟು ವರ್ಷಗಳಿಂದಲೂ ಕೂಡ ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದೇನೆ. ಆದರೆ ಯಾವುದೇ ರೀತಿಯಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಇದುವರೆಗೂ ಆಗಿಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಮನಸ್ಸಿರುವ ಸಾಕಷ್ಟು ಜನರು ಇದ್ದಾರೆ. ಅವರನ್ನ ಭೇಟಿ ಕೂಡ ಮಾಡಿದ್ದೇನೆ. ಇಂಟ್ರೆಸ್ಟಿಂಗ್ ಅಂದರೆ ನಾನು ಮಗುವಿಗೆ ಜನ್ಮ ನೀಡಿದ ನಂತರವೂ ಕೂಡ ಸಿನಿಮಾರಂಗದಲ್ಲಿ ಮುಂದುವರೆಯಲು ಆಸೆ ಪಡುತ್ತೇನೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.
Comments