ರಾತ್ರಿಯ ವೇಳೆ ಇಯರ್ ಪೋನ್ ಹಾಕಿಕೊಂಡು ಮಲಗುತ್ತಿರಾ? ಹಾಗಾದ್ರೆ ಇದನ್ನೊಮ್ಮೆ ಓದಿ..!

ಎಲ್ಲರಿಗೂ ಕೂಡ ಹಾಡು ಕೇಳೋದು ಅಂದ್ರೆ ತುಂಬಾ ಇಷ್ಟ.. ಹಾಗಾಗಿ ಈಗ ಎಲ್ಲರೂ ಕೂಡ ಇಯರ್ ಪೋನ್ ಮೋರೆ ಹೋಗ್ತಾರೆ. ಕೆಲವೊಮ್ಮೆ ಮಲಗಿಕೊಳ್ಳುವಾಗ ಕೂಡ ಇಯರ್ ಪೋನ್ ಯೂಸ್ ಮಾಡ್ತಾರೆ. ಹೀಗೆ ಮಾಡಿ ಸಾವು ತಂದು ಕೊಂಡ ಮಹಿಳೆಯ ಸುದ್ದಿ ಇದು.
46 ವರ್ಷದ ಫಾತಿಮಾ ಎಂಬಾಕೆ ರಾತ್ರಿ ಮಲಗುವ ವೇಳೆ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊಂಡು ಮಲಗಿದ್ದ ಪರಿಣಾಮ ಮಹಿಳೆ ವಿದ್ಯುತ್ ಶಾಕ್ ತಗುಲಿ ಸಾವಿಗೆ ಈಡಾಗಿರುವ ಘಟನೆ ತಮಿಳುನಾಡಿನ ಕಾತನೂರ್ ನಲ್ಲಿ ನಡೆದಿದೆ.ಈಕೆಯ ಪತಿ ಅಬ್ದುಲ್ ಕಲಾಂ ಭಾನುವಾರ ಬೆಳಗ್ಗೆ ಪತ್ನಿಯನ್ನ ಎಬ್ಬಿಸಲು ಹೋಗಿದ್ದಾರೆ. ಆದರೆ ಫಾತಿಮಾ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಅವರು ಎದ್ದೇಳಿಲ್ಲ. ಬಳಿಕ ಗಾಬರಿಗೊಂಡ ಪತಿ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಅಷ್ಟರಲ್ಲಿ ಫಾತಿಮಾ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಫಾತಿಮಾ ಅವರು ಪ್ರತಿದಿನ ಮಲಗುವ ವೇಳೆ ಕಿವಿಗೆ ಇಯರ್‍ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ಮಲಗುವ ರೂಢಿ ಬೆಳೆಸಿಕೊಂಡಿದ್ದರು. ಅದೇ ರೀತಿ ಶನಿವಾರ ರಾತ್ರಿ ಕೂಡ ಇಯರ್ ಫೋನ್ ಹಾಕಿಕೊಂಡು ಮಲಗಿದ್ದಾರೆ. ಆಗ ಶಾರ್ಟ್ ಸರ್ಕ್ಯೂಟ್‍ನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಅಂತ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Comments