ಕೆಂಪು ಸರೋವರ ಎಲ್ಲಿದೆ ಹೇಗಿದೆ ಅನ್ನೋದು ಏನಾದ್ರೂ ಗೊತ್ತಾ..?

ಎಲ್ಲರಿಗೂ ಗೊತ್ತಿರೋ ಹಾಗೆ ಸಮುದ್ರದ ನೀರು, ನದಿ ನೀರು, ಸರೋವರದ ನೀರಿನ ಬಣ್ಣ ಬಿಳಿ ಬಣ್ಣ ಅಥವಾ ಆಕಾಶ ನೀಲಿ ಬಣ್ಣದಿಂದ ಕೂಡಿರುತ್ತೆ. ಆದ್ರೆ ನೀವಿಗ ನೋಡ್ತಿರೋ ಸರೋವರವನ್ನ ಸ್ವಲ್ಪ ಗಮನಿಸಿ. ಅಯ್ಯೋ ಏನಿದು ಸರೋವರದ ನೀರಿನ ಬಣ್ಣ ಕೆಂಪಾಗಿದೆ ಅಂತ ಅಂದುಕೊಂಡ್ರ. ಹೌದು ಈ ಸರೋವರದ ಬಣ್ಣ ವರ್ಷವಿಡೀ ರಕ್ತಗೆಂಪಾಗಿರುತ್ತೆ. ವಿಶೇಷವಾಗಿರೋ ಈ ಸರೋವರ ಇರೋದು ಟರ್ಕಿಯ ಅಕ್ಸೋರ್ ನಗರದಲ್ಲಿ.
ಇದರ ಹೆಸರು ತುಜ್ ಗೋಲು ಸರೋವರ ಅಂತ. ಈ ಸರೋವರ ಷರ್ವ ಪೂರ್ತಿ ಕೆಂಪು ಬಣ್ಣದಿಂದ ಕೂಡಿರುತ್ತೆ. ಪ್ರವಾಸಿಗರ ಆಕರ್ಷಣಿಯ ಸ್ಥಳಗಳಲ್ಲಿ ಒಂದಾಗಿರೋ ಇರುವ ಈ ಸರೋವರ ಜಗತ್ತಿನ ಅತ್ಯಂತ ದೊಡ್ಡ ಸರೋವರಗಳ ಲಿಸ್ಟ್‍ನಲ್ಲಿ ಸೇರ್ಪಡೆಯಾಗಿದೆ. ತುಜ್ ಗೋಲು ಸರೋವರ ನೋಡಲು ಬರುವ ಪ್ರವಾಸಿಗರು ಅಯ್ಯೋ ರಕ್ತ ಅಂತಾ ಉದ್ಗಾರ ತೆಗಿತಾರೆ. ತುಜ್ ಗೋಲು ಸರೋವರ ಈ ರೀತಿ ಕೆಂಪಾಗಿ ಇರೋದಕ್ಕೆ ಕಾರಣ ಇದೆ. ಸರೋವರದ ಸುತ್ತಾ ಮುತ್ತಾ ಇರೋ ವಾತಾವರಣ ಇಡೀ ನೀರನ್ನ ಕೆಂಪಾಗಿಸಿದೆ. ಅಲ್ಲದೆ ವಿಜ್ಞಾನಿಗಳು ಹೇಳೋ ಪ್ರಕಾರ ಹೆಚ್ಚಿನ ಲವಣ ಅಂಶ ಕಂಡುಬರೋದ್ರಿಂದ ತುಜ್ ಗೋಲು ಸರೋವರದ ನೀರು ಕೆಂಪಾಗಿದೆ ಅಂತ ಹೇಳ್ತಾರೆ. ಸುಮಾರು 580 ಮೈಲು ಉದ್ದವಿರೋ ಈ ಸರೋವರದ ಆಳ ಮಾತ್ರ ಕೇವಲ 5-6 ಮೀಟರ್ ಅಷ್ಟೆ. ಇನ್ನೂ ತುಜ್ ಗೋಲು ಸರೋವರ ಟರ್ಕಿಯ ಎರಡನೇ ಅತಿ ದೊಡ್ಡ ಸರೋವರ ಎನಿಸಿದೆ. ಸರೋವರದಲ್ಲಿ ಲವಣದ ಅಂಶ ಹೆಚ್ಚಾಗಿ ಇರುವ ಕಾರಣ ಇಲ್ಲಿ ಶೇ.63 ರಷ್ಟು ಉಪ್ಪು ತಯಾರಿಸಲಾಗುತ್ತೆ. ಆದ್ರೆ ಈ ಸರೋವರದ ನೀರನ್ನ ಇತರೆ ಕೃಷಿ ಕೆಲಸಗಳಿಗೆ ಬಳಸಿಕೊಳ್ಳಲ್ಲ. ಒಟ್ಟಾರೆಯಾಗಿ ವಿಶಿಷ್ಟವಾಗಿರೋ ತುಜ್ ಗೋಲು ಸರೊವರ ಎಲ್ಲರನ್ನ ಸೆಳಿತಿರೋದಂತು ಮಾತ್ರ ನಿಜ.
Comments