ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ ಜೂನ್ 21 ರಿಂದ ಆರಂಭ

ನೆನ್ನೆ ಅಷ್ಟೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಬಂದಿದೆ. ಪಾಸಾಗಿರುವ ಮಕ್ಕಳು ಖುಷಿಯಲ್ಲಿದ್ದರೆ ಪೇಲಾದವರು ಬೇಜಾರಿನಲ್ಲಿದ್ದಾರೆ.ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆಯು ಜೂನ್ 21 ರಿಂದ 28 ರ ವರೆಗೆ ನಡೆಯಲಿದೆ.
ಜೂನ್ ತಿಂಗಳಿನಿಂದ ಪರೀಕ್ಷೆಗಳು ಆರಂಭವಾಗಲಿದ್ದು 21 ರಂದು ಗಣಿತ, ಸಮಾಜಶಾಸ್ತ್ರ, ಜೂನ್ 22 ರಂದು ಪ್ರಥಮ ಭಾಷೆಗಳಾದ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಇಂಗ್ಲಿಷ್, ಉರ್ದು ಸಂಸ್ಕೃತ ವಿಷಯದ ಪರೀಕ್ಷೆಗಳು ನಡೆಯಲಿವೆ. ಜೂನ್ 25 ರಂದು ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜೂನ್ 26 ರಂದು ದ್ವಿತೀಯ ಭಾಷೆ ವಿಷಯದ ಪರೀಕ್ಷೆ ನಡೆಯಲಿವೆ.ಜೂನ್ 27 ರಂದು ಸಮಾಜ ವಿಜ್ಞಾನ, ಜೂನ್ 28 ರಂದು ತೃತೀಯ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಮರುಮೌಲ್ಯ ಮಾಪನಕ್ಕೆ ಮೇ 11 ರಿಂದ 21 ರ ವರೆಗೆ(ಶುಲ್ಕ 705 ರೂ.), ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 9 ರಿಂದ 18 ರ ವರೆಗೆ(ಶುಲ್ಕ 305 ರೂ.) ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
Comments