ನಂದಿನಿ ಹಾಲಿನ ಪ್ಯಾಕೆಟ್ ಮೇಲೂ ಮೂಡಿತು ಮತದಾನದ ಜಾಗೃತಿ..!

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲೆಡೆಯೂ ಕೂಡ ಮತದಾನದ ಜಾಗೃತಿಯನ್ನು ಚುನಾವಣಾ ಆಯೋಗ ಮೂಡಿಸುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಗ ಕೆಎಂಎಫ್ ಕೂಡ ಶುರು ಮಾಡಿದೆ.
ನಂದಿನಿ ಹಾಲಿನ ಪ್ಯಾಕೆಟ್ ಮೇಲೂ ಕೂಡ ಮೇ 12ರಂದು ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶವನ್ನು ಮುದ್ರಿಸಲಾಗಿದ್ದು, ಈಗಾಗಲೇ ಕೆಎಸ್‍ಆರ್‍ಟಿಸಿ ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲೂ ಕೂಡ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಮುದ್ರಣ ಮಾಡಿದೆ. ಕೆಎಸ್‍ಆರ್‍ಟಿಸಿಯ ಮೈಸೂರು ನಗರ ಸಾರಿಗೆ, ಬಿಎಂಟಿಸಿ ಬಸ್‍ಗಳ ಒಳ ಭಾಗದಲ್ಲಿ ಸ್ಥಳ ಸೂಚಿಸುವ ಡಿಜಿಟಲ್ ಡಿಸ್‍ಪ್ಲೇನಲ್ಲೂ ಕೂಡ ಮತದಾನದ ಅರಿವು ಮೂಡಿಸುವ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ.
Comments