ಗರ್ಭಿಣಿಯರ ಪ್ರಮುಖ ಆಹಾರಗಳಲ್ಲಿ ಇದು ಕೂಡ ಒಂದು..!

07 May 2018 5:40 PM | General
489 Report

ತಾಯಿ ಆಗೋದು ಪ್ರತಿಯೊಬ್ಬ ಹೆಣ್ಣಿನ ಕನಸು. ಇದೊಂದು ಅಪೂರ್ವವಾದ ಅನುಭವವೂ ಕೂಡ ಆಗಿರುತ್ತದೆ. ಗರ್ಭಾವಸ್ಥೆಯಲ್ಲಿ  ಆಹಾರದ ಬಗ್ಗೆ ಅಲಕ್ಷ್ಯ ವಹಿಸಬಾರದು.ಈ ಸಮಯದಲ್ಲಿ ಉತ್ತಮ ಪೌಷ್ಟಿಕ ಆಹಾರ ಪಡೆಯಬೇಕಾಗುತ್ತದೆ.

ಪೌಷ್ಟಿಕ ಆಹಾರ ಸೇವನೆಯಿಂದಲೇ ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂಭತ್ತು ತಿಂಗಳು ಕೂಡ ದೇಹದಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತಿರುತ್ತವೆ. ಹಾಗೂ ಈ ಅವಧಿಗಳಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗಾಗಿ ವಿಶೇಷವಾದ ಆಹಾರಕ್ರಮವನ್ನು ಅನುಸರಿಸಬೇಕಾಗುತ್ತದೆ.ಅವುಗಳಲ್ಲಿ ಸೇಬು ಕೂಡ ಒಂದು.

ರಕ್ತಹೀನತೆಯನ್ನು ನಿವಾರಿಸುತ್ತದೆ
ಉಬ್ಬಸವನ್ನು ತಟೆಗಟ್ಟುವಲ್ಲಿ ಸೇಬು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಅಸ್ತಮಾದ ವಿರುದ್ಧ ಹೋರಾಟವನ್ನು ನಡೆಸುತ್ತದೆ
ಜೀರ್ಣಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಹೃದಯ ನಿಮ್ಮದಾಗುವಂತೆ ಮಾಡುತ್ತದೆ.



Edited By

Manjula M

Reported By

Manjula M

Comments