ನಟಿ ರೋಜ ಮಾತಿಗೆ ಟಾಂಗ್ ಕೊಟ್ಟ ಶ್ರೀರೆಡ್ಡಿ..!

ಕಳೆದ ಒಂದೂವರೆ ತಿಂಗಳಿಂದಲೂ ಕೂಡ ತೆಲುಗು ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್' ವಿರುದ್ಧ ಬಹಿರಂಗ ಪ್ರತಿಭಟನೆ ನಡೆಯುತ್ತಲೆ ಇದೆ. ನಟಿ ಶ್ರೀರೆಡ್ಡಿ ಅಂತೂ ಸಿನಿರಂಗದ ಅನೇಕ ದಿಗ್ಗಜರ ಹೆಸರನ್ನ ಇದರಲ್ಲಿ ಸಿಲುಕಿಸಿದ್ದಾರೆ.
ಇತ್ತೀಚಿಗಷ್ಟೆ ನಟ ರಾಜಶೇಖರ್ ಪತ್ನಿ ಜೀವಿತಾ ಅವರ ಬಗ್ಗೆ ಗಂಭೀರ ಆರೋಪವು ಕೇಳಿ ಬಂದಿತ್ತು. ಹಾಸ್ಟೆಲ್ ಯುವತಿಯರನ್ನು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವು ನಟಿಯರು ಕಿಡಿಕಾರಿದ್ದರು. ಇಷ್ಟೆಲ್ಲ ಬೆಳವಣಿಗೆ ಬಗ್ಗೆ ನಟಿ ,ಶಾಸಕಿ ರೋಜಾ ಅವರು ಸಂದರ್ಶನದಲ್ಲಿ ಮಾತನಾಡಿದ್ದರು. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ, ರಾಜಶೇಖರ್ ಮತ್ತು ಜೀವಿತಾ ಅವರ ಮೇಲಿನ ಆರೋಪ ಸುಳ್ಳು ಎಂದು ರೋಜ ಸಮರ್ಥಿಸಿಕೊಂಡಿದ್ದರು. ಇದಕ್ಕೆ ಶ್ರೀರೆಡ್ಡಿ ತಿರಗೇಟು ನೀಡಿ ಫೇಸ್ ಬುಕ್ ನಲ್ಲಿ ರೋಜಾಗೆ ಕಾಲೆಳೆದಿದ್ದಾರೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದ ನಟಿ ರೋಜಾಗೆ ನಟಿ ಶ್ರೀರೆಡ್ಡಿ ಟಾಂಗ್ ನೀಡಿದ್ದಾರೆ. ಬಹುಶಃ ''ರೋಜಾ ಅವರು ಯಾರಿಗೂ ಇಷ್ಟವಾಗಿಲ್ಲ. ಅದಕ್ಕೆ ಅವರನ್ನ ಯಾರೂ ಕೂಡ ಕೆಣಕಿಲ್ಲ'' ಎಂದು ಕಾಲೆದಿರುವ ನಟಿ ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದಾರೆ. ಈ ಕಾಸ್ಟಿಂಗ್ ಕೌಚ್ ಇನ್ನೂ ಎಲ್ಲಿಗೆ ಹೋಗಿ ನಿಲ್ಲುತ್ತೋ ನೋಡಬೇಕು.
Comments