ಆ್ಯಂಬುಲೆನ್ಸ್ನಲ್ಲಿ ಸೀರೆ ಸಾಗಾಣಿಕೆ: ನಾಲ್ವರು ಅರೆಸ್ಟ್

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲೆಡೆಯೂ ಬಿಗಿ ಭದ್ರತೆಯನ್ನು ನಡೆಸಲಾಗುತ್ತಿದೆ. ಚುಣಾವಣಾ ಆಯೋಗದ ಕಣ್ಣನ್ನು ತಪ್ಪಿಸಿ ಸಾಕಷ್ಟು ಜನ ನಗದು ಮತ್ತು ಮತ್ತಿತ್ತರ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ. ಅಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ.
ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂಬುದನ್ನು ಪುಷ್ಟೀಕರಿಸುವ ಪ್ರಕರಣವೊಂದು ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೀಗ ನಡೆದಿದೆ. ಮತದಾರರಿಗೆ ಸೀರೆ ಹಂಚಲು ರಾಜಕೀಯ ಪಕ್ಷವೊಂದು ಆ್ಯಂಬುಲೆನ್ಸ್ ಬಳಸಿಕೊಂಡಿರುವುದು ತಿಳಿದು ಬಂದಿದೆ. ಬೆಳಗಾವಿಯಿಂದ ಹಾವೇರಿಗೆ ಹೋಗುತ್ತಿದ್ದ ಆಂಬ್ಯುಲೆನ್ಸ್‍ನಲ್ಲಿ ಮತದಾರರಿಗೆ ಹಂಚಲು ಸೀರೆಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಜಪ್ತಿ ಮಾಡಿ 9 ಲಕ್ಷ ರೂ. ಮೌಲ್ಯದ 1800 ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಆ್ಯಂಬುಲೆನ್ಸ್‍ನಲ್ಲಿ ಸೀರೆ ಸಾಗಿಸುತ್ತಿದ್ದ ನಾಲ್ವರನ್ನು ಗರಗ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Comments