ಯಶಸ್ಸಿನ ಗುಟ್ಟು ಬಿಚ್ಚಿಟ್ಟ SSLC ಟಾಪರ್ಸ್
ವಿದ್ಯಾರ್ಥಿಗಳ ಪಾಲಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಎಷ್ಟು ಮುಖ್ಯ ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.. ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರಿಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಬಂದಿದ್ದು ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ.
ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಫಸ್ಟ್ ಬಂದಿರುವುದು ಮೈಸೂರಿನ ಹುಡುಗ. ಎಸ್.. ಎಸ್ಎಸ್ ಎಲ್ ಸಿ ಯಲ್ಲಿ ಮೈಸೂರಿನ ಸದ್ವಿದ್ಯಾ ಶಾಲೆಯ ಎಂ ಎಸ್ ಯಶಸ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಇದರ ಬಗ್ಗೆ ಸಂತೋಷವನ್ನು ಹಂಚಿಕೊಂಡಿರುವ ಯಶಸ್ “ ಯಾವುದಕ್ಕೂ ಟೆನ್ಷನ್ ಮಾಡಿಕೊಳ್ಳದೆ ಓದಿದರೆ ಖಂಡಿತ ಉತ್ತಮ ಅಂಕ ಪಡೆಯಬಹುದು ಎಂದು ತಿಳಿಸಿದ್ದಾರೆ” ಇನ್ನೂ ಇದೇ ಶಾಲೆಯ ಅಧಿತಿ ಕೂಡ 625 ಕ್ಕೆ 624 ಅಂಕಗಳನ್ನು ಪಡೆದು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Comments