ಕರ್ನಾಟಕ: ಹೆಣ್ಣು ಮಕ್ಕಳ ದತ್ತು ಸ್ವೀಕಾರದಲ್ಲಿ 2 ನೇ ಸ್ಥಾನ..!

07 May 2018 11:33 AM | General
546 Report

ಸ್ತ್ರಿ ಎಂದರೆ ನಿಜಕ್ಕೂ ಕೈ ಎತ್ತಿ ಮುಗಿಯಬೇಕು ಅನಿಸುತ್ತದೆ. ಯಾಕಂದರೆ ಹೆಣ್ಣು ಕರುಣಾಮಯಿ.. ಹೆಣ್ಣು ಸ್ಫೂರ್ತಿಧಾತೆ. ಹೆಣ್ಣೆ ಎಲ್ಲಾ….ಹೌದು ಹೆಣ್ಣಿಂದಲೆ ಜನನ ಎಂಬುದನ್ನು ಮರೆತರೆ ಅವರಿಗೆ ಮರಣವೆ ಸರಿಯಾದ ಶಿಕ್ಷೆ ಎನ್ನಬಹುದು.

ಹೆಣ್ಣು ಮಕ್ಕಳನ್ನು ಕೇವಲವಾಗಿ ಕಾಣುವ ಕಾಲವಿತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ದತ್ತು ಸ್ವೀಕರಿಸಿದ ಮಕ್ಕಳಲ್ಲಿ ಶೇ.60 ರಷ್ಟು ಮಂದಿ ಹೆಣ್ಣು ಮಕ್ಕಳಾಗಿದ್ದಾರೆ. ಹೆಣ್ಣು ಮಕ್ಕಳ ದತ್ತು ಸ್ವೀಕಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಮ್ಮ ಕರ್ನಾಟಕದಲ್ಲಿ 286 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದ್ದು, ಅವರಲ್ಲಿ 167 ಹೆಣ್ಣು ಮಕ್ಕಳಿದ್ದಾರೆ. ಅಂತರ ರಾಷ್ಟ್ರೀಯ ದತ್ತು ಸ್ವೀಕಾರ ಪ್ರಮಾಣವೂ ಕೂಡ ಹೆಚ್ಚಳವಾಗಿದ್ದು, ಅಮೆರಿಕ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್‌ನ ಕುಟುಂಬಗಳು ಭಾರತದ ಮಕ್ಕಳನ್ನು ದತ್ತು ಪಡೆದಿವೆಯಂತೆ. ಈಗಲಾದರೂ ಹೆಣ್ಣು ಮಕ್ಕಳು ಮೌಲ್ಯ ಎಲ್ಲರಿಗೂ ಇಳಿಯುವಂತಾಗಿದೆ.

 

Edited By

Manjula M

Reported By

Manjula M

Comments