ಟ್ವಿಟರ್ ಮ್ಯಾನೆಜ್ ಮೆಂಟ್ ಗೆ ಬಿಗ್ ಬಿ ಮಾಡಿದ ಮನವಿ ಏನು ಗೊತ್ತಾ?

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ಸಕ್ರಿಯವಾಗಿವೆ ಎಂದರೆ ದಿನವಿಡಿ ಎಲ್ಲರೂ ಪೇಸ್ ಬುಕ್, ಟ್ವೀಟರ್ ಅಂತ ದಿನವಿಡಿ ಮುಳುಗಿ ಹೋಗಿರುತ್ತಾರೆ. ಆದರೆ ಬಾಲಿವುಡ್ ಮಂದಿ ಇದಕ್ಕೆ ಏನು ಹೊರತಾಗಿಲ್ಲ, ಅವರು ಕೂಡ ಪೇಸ್ ಬುಕ್, ಟ್ವೀಟರ್ ಅಂತ ಸಕ್ರಿಯವಾಗಿರುತ್ತಾರೆ.
ಇದೇ ಸಾಲಿಗೆ ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್ ಕೂಡ ಸೇರುತ್ತಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವಾಲೂ ಸಕ್ರಿಯರಾಗಿದ್ದು, ಅಭಿಮಾನಿಗಳೊಂದಿಗೆ ತಮ್ಮ ಸುಖ ದುಖಃಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇದೀಗ ಅವರು ತನ್ನ ಟ್ವಿಟರ್ ಫಾಲೋವರ್ಸ್ ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರಂತೆ. ಈ ವಿಷಯವಾಗಿ ಶುಕ್ರವಾರ ಟ್ವಿಟ್ ಮಾಡಿರುವ ಬಿಗ್ ಬಿ ಅವರು ,' ನಾನು ಹಲವು ವಿಚಾರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತೇನೆ. ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತೇನೆ. ಟ್ವಿಟ್ಟರ್ ನಲ್ಲಿ ಹೆಚ್ಚು ಕಾರ್ಯೋನ್ಮುಖನಾಗಿದ್ದೇನೆ. ಆದರೂ ನನ್ನ ಫಾಲೋವರ್ಸ್ ಗಳ ಸಂಖ್ಯೆ ಯಾಕೋ ಹೆಚ್ಚುತ್ತಿಲ್ಲ. ಫಾಲೋವರ್ಸ್ ಗಳನ್ನು ಹೆಚ್ಚಿಸಲು ಇನ್ನು ಏನು ಮಾಡಬೇಕು ಹೇಳಿ ಎಂದು ಟ್ವಿಟರ್ ಮ್ಯಾನೆಜ್ ಮೆಂಟ್ ಗೆ ಮನವಿ ಮಾಡಿದ್ದಾರೆ. ಈ ಮೂಲಕವಾದರೂ ಅಭಿಮಾನಿಗಳ ಜೊತೆ ನಟ ನಟಿಯರು ಒಡನಾಟವನ್ನು ಇಟ್ಟುಕೊಂಡಿರುವುದು ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ.
Comments