ನಿರ್ದೇಶಕ ಪಿ.ಎನ್.ಸತ್ಯ ರವರ ನಿಧನಕ್ಕೆಕಣ್ಣೀರಿಟ್ಟ ಕಿಚ್ಚ  

07 May 2018 10:38 AM | General
549 Report

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರಾದ ಪಿ.ಎನ್.ಸತ್ಯ ಅವರು ಶನಿವಾರ ಲೋ ಬಿಪಿಯಿಂದ ಬಾರದ ಲೋಕಕ್ಕೆ ಪಯಣವನ್ನು ಬೆಳಸಿದ್ದಾರೆ. ಈ ಬಗ್ಗೆ ಇಡಿ ಸ್ಯಾಂಡಲ್ ವುಡ್ ಸಿನಿಮಾ ತಾರೆಯರು ಕಂಬನಿ ಮಿಡಿದಿದ್ದಾರೆ. ನಟ ಸುದೀಪ್ ಅವರು ಕೂಡ ಪಿ.ಎನ್.ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದಾರೆ. 

ನಟ ಕಿಚ್ಚ  ಸುದೀಪ್ ಅವರು ಈ ಪಿಎನ್ ಸತ್ಯ ಅವರ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.' ನಾನು ಇನ್ನೂ ಕೂಡ ಪಿ.ಎನ್.ಸತ್ಯ ಅವರ ಸಾವಿನ ಸುದ್ದಿಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ನಾನು ಅವರ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ  ಭಾಗಿಯಾಗಿ ಮಾತನಾಡುವ ಅವಕಾಶ ಕೂಡ ಸಿಕ್ಕಿತ್ತು. ಅಷ್ಟೆ ಅಲ್ಲದೆ ಅವರ ಜೊತೆಗೆ 'ಗೂಳಿ' ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದೆ. ಆದರೆ ಇಷ್ಟು ಬೇಗ ಅವರ ಬಾರದ ಲೋಕಕ್ಕೆ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಪಿಎನ್ ಸತ್ಯ ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Edited By

Manjula M

Reported By

Manjula M

Comments