22 ವರ್ಷಗಳ ನಂತರ ಈ ಹಳ್ಳಿಯಲ್ಲಿ ಮದುವೆ ಸಂಭ್ರಮ!

05 May 2018 5:15 PM | General
715 Report

ಮದುವೆ ಅನ್ನೋದು ಎಲ್ಲರ ಜೀವನದ ಮುಖ್ಯವಾದ ಘಟ್ಟ ಅಂದರೆ ನಿಜ್ಕಕೂ ತಪ್ಪಾಗುವುದಿಲ್ಲ. ಇದೊಂದು ಗಂಡು ಮತ್ತು ಹೆಣ್ಣಿನ ಅವಿನಾಭಾವ ಸಂಬಂಧ ಇದ್ದ ಹಾಗೆ. ಆದರೆ ಈ ಗ್ರಾಮದಲ್ಲಿ ಬರೋಬ್ಬರಿ 22 ವರ್ಷಗಳಿಂದ ಯಾವ ಮದುವೆಯೂ ಕೂಡ ಆಗೆ ಇಲ್ಲ ಅಂದರೆ ನೀವು ನಂಬಲೇ ಬೇಕು.

ಯಾವುದೋ ಶಾಪಕ್ಕೆ ಗುರಿಯಾಗಿರುವ ರಾಜಸ್ಥಾನದ ದೋಲ್‍ಪುರ ಜನರು 22 ವರ್ಷಗಳ ಬಳಿಕ ಮದುವೆಯ ಸಂಭ್ರಮದಲ್ಲಿ ಇದ್ದಾರೆ. 1996 ರಲ್ಲಿ ಈ ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಆದರೆ  22 ವರ್ಷಗಳಿಂದ  ಈ ಗ್ರಾಮದಲ್ಲಿ ಯಾವುದೆ ಮದುವೆಯ ಸಂಭ್ರಮವು ಕೂಡ ಮನೆ ಮಾಡಿರಲಿಲ್ಲ. ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಈ ಹಳ್ಳಿಗೆ ವಿದ್ಯುತ್, ರಸ್ತೆ, ನೀರು ಯಾವುದು ಇಲ್ಲ. ಈ ಗ್ರಾಮದಲ್ಲಿ ಯಾವುದೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಇಲ್ಲಿನ ಯುವಕರಿಗೆ ಯಾರು ಹೆಣ್ಣು ನೀಡಲು ಯಾರು ಮುಂದೇ ಬರುತ್ತಿರಲಿಲ್ಲ. ಆದ್ದರಿಂದ ಇಲ್ಲಿನ ಯುವಕರೆಲ್ಲರೂ ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಆದರೆ ಈ ಬಾರಿ ಗ್ರಾಮದ ಪವನ್ ಎಂಬ ಯುವಕನಿಗೆ ಮದುವೆ ನಿಶ್ಚಯವಾಗಿದ್ದು, ದೋಲ್ ಪುರ್ ಹಳ್ಳಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಈ ದೋಲ್ ಪುರ್ ಗ್ರಾಮದಲ್ಲಿ 40 ಕಚ್ಚಾ ಮನೆಗಳಿವೆ. 300 ಜನ ವಾಸ ಮಾಡುತ್ತಿದ್ದಾರೆ. ಸರ್ಕಾರದ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮಕ್ಕೆ ಒಂದು ಶಾಲೆ ಹಾಗೂ ನೀರಿನ ಕೈ ಪಂಪ್ ಅನ್ನು ನೀಡಿದೆ. ಈ ಗ್ರಾಮದಲ್ಲಿ ಮತ್ತೆ ಮದುವೆ ಸಂಭ್ರಮ ಬಂದಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.

Edited By

Manjula M

Reported By

Manjula M

Comments