ತೂಕ ಇಳಿಸಿಕೊಳ್ಳುವುದು ಈಗ ಮತ್ತಷ್ಟು ಸುಲಭ..!
ಕೆಲವೊಬ್ಬರಿಗೆ ಕೆಲವೊಂದು ಹವ್ಯಾಸಗಳು ಇರುತ್ತವೆ.ಆದರೆ ಅದೇ ಹವ್ಯಾಸಗಳು ಕೆಲವೊಮ್ಮೆ ಅಭ್ಯಾಸಗಳಾಗಿರುತ್ತವೆ. ಕೆಲವರು ಟೀ ಕುಡಿಯೋದನ್ನ ತುಂಬ ಅಭ್ಯಾಸ ಮಾಡಿಕೊಂಡಿರುತ್ತಾರೆ. ಟೀ ಕುಡಿದಿಲ್ಲ ಎಂದರೆ ತಲೆ ಓಡೋದೆ ಇಲ್ಲ ಅನ್ನೋ ತರ ಆಡ್ತಾರೆ.
ಇದೀಗ ವಿಶ್ವದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಪಾನೀಯವೆಂದರೆ ಅದು ಟೀ. ಎಸ್.. ಕೆಲವರಿಗೆ ಟೀ ಅಂದರೆ ತುಂಬಾ ಇಷ್ಟ. ಇತ್ತಿಚಿಗೆ ಗ್ರೀನ್ ಟೀ ಟ್ರೆಂಡ್ ಕ್ರಿಯೇಟ್ ಆಗಿದೆ. ಅದರಲ್ಲೂ ಹೆಚ್ಚು ಬೊಜ್ಜು ಇರುವವರು ಗ್ರೀನ್ ಟೀ ಹೆಚ್ಚಾಗಿ ಸೇವಿಸುತ್ತಾರೆ. ಅದಕ್ಕಾಗಿ ಡಯಟ್ ಪ್ಲಾನ್ ಮಾಡಿಕೊಂಡರೆ ಒಳ್ಳೆಯದು. ಗ್ರೀನ್ ಟೀ ಯನ್ನು ಮತ್ತಷ್ಟು ಸ್ವಾದಿಷ್ಟ ಮಾಡಿಕೊಮಡು ಕುಡಿದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಗ್ರೀನ್ ಟೀ ಜೊತೆಗೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಕುಡಿದರೆ ನಿಮ್ಮ ಬೊಜ್ಜು ಬೇಗನೆ ಕರಗುತ್ತದೆ. ಹೀಗೆ ಮಾಡುವುದರಿಂದ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ತೂಕ ಇಳಿಸಿಕೊಳ್ಳಲು ಸಹಕಾರಿಯಾಗುತ್ತದೆ.
Comments