ಈ ಆಹಾರಗಳೆಲ್ಲಾ ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು..
ಹೆಣ್ಣಿಗೆ ಮದುವೆಯಾಗಿ ತಾಯಿಯಾಗುವ ಸಂದರ್ಭದಲ್ಲಿ ತುಂಬಾ ಖುಷಿಯಾಗಿರುತ್ತಾಳೆ. ತಾಯಿಯಾದವಳು ಏನು ತಿನ್ನಬೇಕು ಏನು ತಿನ್ನಬಾರದು ಎಲ್ಲವನ್ನೂ ಕೂಡ ವೈದ್ಯರು ಹೇಳಿರುತ್ತಾರೆ. ಆದರೂ ಕೂಡ ಈ ಸಮಯದಲ್ಲಿ ಹೆಣ್ಣು ಮಕ್ಕಳು ತುಂಬ ಜಾಗರೂಕತೆಯಿಂದ ಇರಬೇಕು.ತಿನ್ನುವ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಆಕೆ ತುಂಬಾ ಕಷ್ಟ ಪಡಬೇಕಾಗುತ್ತದೆ.
ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಆರೋಗ್ಯ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಗೊತ್ತಿಲ್ಲದೆ ಒಂದು ಸಣ್ಣ ತಪ್ಪು ಮಾಡಿದರೂ ಕೂಡ ತಾಯಿ ಮತ್ತು ಮಗು ಆರೋಗ್ಯದಲ್ಲಿ ಏರು- ಪೇರಾಗುತ್ತದೆ. ಹಾಗಾಗಿ ಆಹಾರದ ಬಗ್ಗೆ ಗಮನ ಇರಬೇಕು. ಹಸಿರು ಸೊಪ್ಪುಗಳು, ಸೀತಾಫಲ ಹಣ್ಣು, ಪ್ರೋಟೀನ್‌ಯುಕ್ತ ಆಹಾರಗಳು,ಸರಿಯಾಗಿ ನೀರು ಕುಡಿಯಬೇಕು,ಸೀಬೆ ಹಣ್ಣು, ಬೀಟ್ ರೂಟ್, ಕೇಸರಿ ಹಾಲು, ಟೊಮೇಟೊ,ಹಾಲು,ಮೊಟ್ಟೆ,ಬೀನ್ಸ್ ಕಾಳುಗಳು ಈ ರೀತಿಯ ಪದಾರ್ಥಗಳನ್ನು ತಿಂದರೆ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು.
Comments