ಉಗುರು ಕಚ್ಚೋ ಹವ್ಯಾಸ ಇದಿಯಾ..ಹಾಗಾದ್ರೆ ಇದನ್ನೊಮ್ಮೆ ಓದಿ.

ಮನುಷ್ಯ ಅಂದ ಮೇಲೆ ಒಂದೊಂದು ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ. ಕೆಲವರಿಗೆ ಕಾಫಿ ಟೀ ಕುಡಿಯೋದು ಹವ್ಯಾಸ, ಇನ್ನೂ ಕೆಲವರಿಗೆ ಸಿಗರೇಟ್ ಸೇದುವುದು ಹವ್ಯಾಸ.. ಈ ಹವ್ಯಾಸಗಳು ಜಾಸ್ತಿ ಆದರೆ ಚಟ ಆಗೋದು ಪಕ್ಕಾ ಗ್ಯಾರೆಂಟಿ.. ಹಾಗಾಗಿ ಎಲ್ಲವೂ ಕೂಡ ಇತಿಮಿತಿಯಲ್ಲಿದ್ದರೆ ಒಳ್ಳೆಯದು.
ಇನ್ನೂ ಕೆಲವರು ಯಾವಾಗಲೂ ಕೂಡ ಉಗುರನ್ನು ಕಚ್ಚಿಕೊಳ್ಳುತ್ತಿರುತ್ತಾರೆ. ಅದು ಕೂಡ ಒಂದು ರೀತಿಯ ಹವ್ಯಾಸ. ಆದರೆ ಆ ಹವ್ಯಾಸ ಅತಿಯಾದರೆ ಅದು ಕೂಡ ಚಟ ಆಗುವುದರಲ್ಲಿ ಯಾವುದೆ ಸಂಶಯವಿಲ್ಲ. ಇಂತಹ ಹವ್ಯಾಸಗಳನ್ನು ನಾವು ಬಿಡಬೇಕು ಅಂದುಕೊಂಡರೂ ಕೂಡ ಬಿಡಲು ಸಾಧ್ಯವಾಗುವುದಿಲ್ಲ. ಚಿಕ್ಕವರಿದ್ದಾಗ ಕೆಲವೊಮ್ಮೆ ಉಗುರನ್ನು ಕಚ್ಚಿಕೊಳ್ಳುತ್ತಿರುತ್ತೇವೆ.. ಅಷ್ಟೆ ಯಾಕೆ ನಾವು ದೊಡ್ಡವರಾದ್ರೂ ಕೂಡ ಈ ಚಾಳಿ ನಮ್ಮನ್ನ ಬಿಡುವುದಿಲ್ಲ. ಒತ್ತಡ ಹೆಚ್ಚಾದಾಗಲೋ ಈ ರೀತಿಯ ರೂಡಿಯನ್ನು ಬೆಳಸಿಕೊಂಡಿರುತ್ತೇವೆ. ಆದರೆ ಉಗುರು ಕಚ್ಚೋದ್ರಿಂದ ಒಳ್ಳೆಯದೇ ಆಗುತ್ತೆ ಎಂದು ವರದಿಯೊಂದು ಹೇಳಿದೆ.
ಬೆರಳ ತುದಿಯ ಚರ್ಮವನ್ನು ಕಡಿಯುವುದು, ಉಗುರು ಕಚ್ಚುವುದು, ಇನ್ನೂ ಕೆಲವೊಂದು ಅಭ್ಯಾಸಗಳನ್ನು ಹೊಂದಿರುವವರನ್ನು ಒಂದು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕೆಲವೊಂದು ರೀತಿಯ ಕಷ್ಟ,ಕ್ಲಿಷ್ಟ ಸರಳ ರೀತಿಯ ಕೆಲಸಗಳನ್ನು ಅವರಿಗೆ ನೀಡಲಾಗಿತ್ತು. ಅದರಲ್ಲಿ ಉಗುರು ಕಚ್ಚುವವರೆ ಬಹುಬೇಗ ತಮಗೆ ನೀಡಿದ್ದ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆಈ ರೀತಿಯ ಸ್ವಭಾವ ಹೊಂದಿರುವವರು ತಮ್ಮ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಸಾಧ್ಯವಾಗದೇ ಉಗುರನ್ನು ಕಚ್ಚಿಕೊಳ್ಳುತ್ತಾರೆ.. ಉಗುರನ್ನು ಕಚ್ಚುವವರು ಪರ್ಫೇಕ್ಟ್ ಅಂತ ಈಗಾಗಲೇ ಅಧ್ಯಯನವೊಂದು ತಿಳಿಸಿದೆ. ಈಗ ಉಗುರು ಕಚ್ಚುವವರು ಸ್ವಲ್ಪ ಖುಷಿ ಪಡಬಹುದು. ಕೆಲವೊಮ್ಮೆ ವಹಿಸಿದ ಕೆಲಸ ಪೂರ್ಣ ಆಗದೆ ಇದ್ದಾಗ ಉಗುರನ್ನು ಕಚ್ಚಲು ಶುರು ಮಾಡುತ್ಥಾರೆ.
ವೈಜ್ಞಾನಿಕವಾಗಿ ನೋಡುವುದಾದರೆ ಇದು ಕ್ಯಾಲ್ಸಿಯಂ ಕೊರತೆಯಿಂದ ಬರುವ ಲಕ್ಷಣ ಎನ್ನಬಹುದು. ಉಗುರು ಕಚ್ಚುವುದರಿಂದ ನಮ್ಮ ದೇಹದ ಮೇಲೂ ಕೂಡ ಸಾಕಷ್ಟು ಪರಿಣಾಮಗಳು ಆಗುತ್ತವೆ. ಉಗುರಿನಲ್ಲಿರು ಕೊಳೆ ಹೊಟ್ಟೆಯನ್ನು ಸೇರುತ್ತದೆ. ಇದರಿಂದ ನಾನಾ ರೀತಿಯ ಕಾಯಿಲೆಗಳು ಉಂಟಾಗುತ್ತವೆ.ಅಷ್ಟೆ ಅಲ್ಲದೆ ಉಗುರು ಕಚ್ಚುವುದರಿಂದ ಹಲ್ಲು ಬಲಹೀನವಾಗಬಹುದು. ಅದಕ್ಕಿಂತ ಹೆಚ್ಚಾಗಿ ಕೈ ಬೆರಳುಗಳು ಅಂದಗೆಡುವುದು ಮಾತ್ರವಲ್ಲ,ನೋಡುಗರಿಗೆ ಅಸಹ್ಯವಾಗಿ ಕಾಣಬಹುದು. ಹಾಗಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬಿಡುವುದು ಒಳ್ಳೆಯದು.
Comments