ವಿಶ್ವದ ಮೊದಲ ಮಹಿಳಾ ವಿಶೇಷ ರೈಲಿಗೆ 26 ವರ್ಷದ ಸಂಭ್ರಮ

05 May 2018 1:22 PM | General
536 Report

ಮಹಿಳೆಯರಿಗೆ ಎಲ್ಲಾ ರೀತಿಯ ವಿಶೇಷ ಸೌಲಭ್ಯಗಳನ್ನು ಸರ್ಕಾರಗಳು ಕೊಡುತ್ತಿವೆ. ಅದೇ ರೀತಿ ವಿಶ್ವದ ಮೊದಲ ಮಹಿಳಾ ವಿಶೇಷ ಟ್ರೈನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದಂತಹ  ಪಶ್ಚಿಮ ರೈಲ್ವೆಯಲ್ಲಿನ ಚರ್ಚ್‌ಗೇಟ್‌ ಮತ್ತು ಬೊರಿವಲಿ ಸ್ಟೇಶನ್‌ಗಳ ನಡುವೆ ಓಡಾಡುತ್ತಿದ್ದ ರೈಲು ಇಂದಿಗೆ 26 ವರ್ಷಗಳ ಸೇವೆಯನ್ನು ಪೂರೈಸುತ್ತಿದೆ ಎಂದು ಅಧಿಕಾಗಳು ತಿಳಿಸಿದ್ದಾರೆ.

ವಿಶ್ವದ ಈ ಮೊದಲ ಮಹಿಳಾ ಸ್ಪೆಶಲ್‌ ರೈಲನ್ನು 1992ರ ಮೇ 5ರಂದು ಪರಿಚಯ ಮಾಡಲಾಗಿತ್ತು.  ಚರ್ಚ್‌ಗೇಟ್‌ ಮತ್ತು ಬೊರಿವಲಿ ಸ್ಟೇಶನ್‌ಗಳ ನಡುವೆ ಮಹಿಳಾ ಪ್ರಯಾಣಿಕರನ್ನು ಮಾತ್ರವೇ ಒಯ್ಯುವ ಈ ರೈಲು ಹೊರವಲಯದ ಸೇವೆಗಾಗಿ ಮಹಿಳೆಯರಲ್ಲಿ ತುಂಬಾ ಜನಪ್ರಿಯವಾಗಿತ್ತು.

 

Edited By

Manjula M

Reported By

Manjula M

Comments