ನಿಮ್ಮ ಕೂದಲಿನ ಆರೈಕೆಗೆ ಮನೆಮದ್ದು

ಇತ್ತಿಚಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆ ಬುರುಡೆಯಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯವಾದ ವಿಷಯವಾಗಿದೆ. ಒತ್ತಡ, ಜೀವನಶೈಲಿ, ಅನಾರೋಗ್ಯಕರ ಆಹಾರ, ನೀರು ಮತ್ತು ಕೂದಲಿನ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಕೂದಲಿನ ಸಮಸ್ಯೆಗಳಿಗೆ ಬಹುತೇಕ ಕಾರಣವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಹೇರ್ ಪ್ಯಾಕ್ ತಯಾರಿಸಿಕೊಳ್ಳಲು ಮುಂದೆ ಓದಿ.
ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿ. ಎರಡನ್ನು ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಕಲಸಿಕೊಳ್ಳಿ. ನಂತರ ಆ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇಬಿಡಿ . ಬಳಿಕ ತಣ್ಣೀರಿನಿ೦ದ ನಿಮ್ಮ ಕೂದಲನ್ನು ತೊಳೆದುಕೊ೦ಡು ನಂತರ ಶಾ೦ಪೂವಿನಿ೦ದ ತೊಳೆಯಿರಿ.
Comments