ದರ್ಶನ್ ಅಭಿಮಾನಿ ಸಾವು- ದರ್ಶನ್ ಬರುವವರೆಗೂ ಅಂತ್ಯ ಸಂಸ್ಕಾರ ಮಾಡಲ್ಲ ಎಂದ ಪೋಷಕರು,ಸ್ನೇಹಿತರು

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊಪ್ಪಲು ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಸಾವನ್ನಪ್ಪಿದ್ದಾರೆ.
ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಭಾಸ್ಕರ್ ರೆಡ್ಡಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಆದರೆ ಇದೀಗ ಅನಾರೋಗ್ಯದಿಂದ ಅಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ ರೆಡ್ಡಿ ದರ್ಶನ್ ಅವರನ್ನು ನೋಡಬೇಕೆಂದು ತಮ್ಮ ಕೊನೆ ಆಸೆಯನ್ನು ತಿಳಿಸಿದ್ದರು. ಆದರೆ ಅವರ ಆಸೆ ಈಡೇರುವ ಮೊದಲೆ ಸಾವನ್ನಪಿದ್ದಾರೆ ಹಾಗಾಗಿ ಇದೀಗ ದರ್ಶನ್ ಆಗಮಿಸುವವರೆಗೂ ಭಾಸ್ಕರ್ ಅಂತ್ಯಸಂಸ್ಕಾರ ಮಾಡದಂತೆ ಸ್ನೇಹಿತರು ಪಟ್ಟು ಹಿಡಿದಿದ್ದಾರೆ. ಸದ್ಯ ಭಾಸ್ಕರ್ ಮನೆಯವರು ಹಾಗೂ ಸ್ನೇಹಿತರು ದರ್ಶನ್ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಚುನಾವಣಾ ಪ್ರಚಾರದಲ್ಲಿರುವ ನಟ ದರ್ಶನ್ ಅಭಿಮಾನಿ ಆಸೆ ಈಡೇರಿಸಲು ಬರುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
Comments