ರಜೆ ಸಮಯದಲ್ಲಿ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿ ಹಣ ಗಳಿಸಿ

ದ್ವಿತೀಯ ಪಿಯುಸಿ ಪಾಸ್ ಅಥವಾ ಪದವಿ ಮುಗಿಸಿ ರಜೆಯಲ್ಲಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶವಿದೆ. ರಜೆಯಲ್ಲಿ ಸುಮ್ಮನೆ ಟೈಮ್ ಪಾಸ್ ಮಾಡುವ ಬದಲು ಸುಮ್ಮನೆ ಕಾಲ ಕಳೆಯುವ ಬದಲು ಅಂಚೆ ಕಚೇರಿಯಲ್ಲಿ ಕೆಲಸ ಮಾಡಿ ಸ್ವಲ್ವ ಹಣ ಗಳಿಸುವ ಉತ್ತಮ ಅವಕಾಶವಿದೆ. ಭಾರತೀಯ ಅಂಚೆ ಕಚೇರಿಯಲ್ಲಿ ವಿದ್ಯಾರ್ಥಿಗಳು ಇಂಟರ್ನ್ಶಿಪ್ ಕೆಲಸ ಮಾಡಿ ಹಣ ಗಳಿಸಬಹುದು.
ಇದರಿಂದ ಅನುಭವದ ಜೊತೆಗೆ ಸ್ಟೈಪೆಂಡ್ ಕೂಡ ನಿಮಗೆ ಸಿಗಲಿದೆ. ಅಂಚೆ ಕಚೇರಿಯಲ್ಲಿ ವಿಮೆ, ಫಂಡ್ ನಿರ್ವಹಣೆ, ಹಣಕಾಸು, ಚಿಲ್ಲರೆ ನಿರ್ವಹಣೆ, ಇ-ವಾಣಿಜ್ಯ, ಕೊರಿಯರ್, ಪಾರ್ಸಲ್, ಆಸ್ತಿ ನಿರ್ವಹಣೆ, ಮಾರುಕಟ್ಟೆ, ಬ್ಯಾಂಕಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಸಾಪ್ಟ್ವೇರ್ ಭದ್ರತೆ ಸೇರಿದಂತೆ ಅನೇಕ ರೀತಿಯ ವಿಭಾಗಗಳಲ್ಲಿ ಕೆಲಸ ಮಾಡಬಹುದು.ಅಂಚೆ ಕಚೇರಿಯಲ್ಲಿ ಇಂಟರ್ನ್ಶಿಪ್ ಕೆಲಸ ಮಾಡಲು ಆಸಕ್ತಿಯಿದ್ದರೆ ಅರ್ಜಿ ಸಲ್ಲಿಸಲು ಮೇ 15 ರವರೆಗೆ ಅವಕಾಶವಿದೆ. ಒಂದು ತಿಂಗಳವರೆಗೆ ಇಂಟರ್ನ್ಶಿಪ್ ಆಗಿ ಕೆಲಸ ಮಾಡಬಹುದು. ಒಂದು ತಿಂಗಳ ನಂತ್ರ ಪ್ರಮಾಣ ಪತ್ರದ ಜೊತೆ 10 ಸಾವಿರ ರೂಪಾಯಿ ನಿಮಗೆ ಸಿಗಲಿದೆ.
https://www.indiapost.gov.in/VAS/Pages/News/Internship_Guideline2018.pdf ಫಾರ್ಮ್ ಡೌನ್ಲೋಡ್ ಮಾಡಿ ಅರ್ಜಿ ತುಂಬಬೇಕು. ಅದ್ರಲ್ಲಿ ನೀಡಿರುವ ವಿಳಾಸಕ್ಕೆ ಅರ್ಜಿಯನ್ನು ಸ್ಪೀಡ್ ಪೋಸ್ಟ್ ಮಾಡಬೇಕು. ಮನೆಯಲ್ಲಿ ಕೂತು ಸುಮ್ಮನೆ ಕಾಲ ಹರಣ ಮಾಡುವ ಬದಲು ಈ ರೀತಿಯ ಕೆಲಸಗಳನ್ನು ಮಾಡಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ.
Comments