ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಸಿಕ್ತು ಭಾರೀ ಮೊತ್ತದ ನಗದು..!
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎಲ್ಲೆಲ್ಲೂ ಕಣ್ಗಾವಲಿಟ್ಟಿದ್ದರೂ ಕೂಡ ಅಕ್ರಮವಾಗಿ ಹಣವನ್ನು ಸಾಗಿಸುತ್ತಲೆ ಇದ್ದಾರೆ. ಅದಕ್ಕೆ ಒಳ್ಳೆಯ ನಿದರ್ಶನದಂತೆ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮನುಗನಹಳ್ಳಿಯ ಚೆಕ್ ಪೋಸ್ಟ್ ಬಳಿ ಕೆಎಸ್ ಆರ್ ಟಿಸಿ ಬಸ್ ನಿಂದ ಸುಮಾರು 50 ಲಕ್ಷ ರೂ.ಗೂ ಹೆಚ್ಚು ನಗದನ್ನು ವಶ ಪಡಿಸಿಕೊಂಡಿದ್ದಾರೆ.
ರಾಜಕೀಯದಲ್ಲಿರುವವರು ತುಂಬಾ ಬುದ್ದಿವಂತರು, ಹಾಗಾಗಿ ಖಾಸಗಿ ವಾಹನಗಳನ್ನು ಬಳಸಿದರೆ ಅನುಮಾನ ಬರುತ್ತದೆ ಎಂದು ನಗದನ್ನ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿಯೇ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಬಸ್ ತಪಾಸಣೆ ನಡೆಸಿದ ಚೆಕ್ ಪೋಸ್ಟ್ ಸಿಬ್ಬಂದಿಗೆ ಈ ಭಾರೀ ಮೊತ್ತದ ಹಣ ಸಿಕ್ಕಿದೆ. ಹಣ ಯಾರಿಗೆ ಅಥವಾ ಯಾವಪ ಪಕ್ಷಕ್ಕೆ ಸೇರಿದ್ದು ಎಂಬ ಬಗ್ಗೆ ಖಚಿತ ಮಾಹಿತಿ ಇನ್ನೂ ದೊರೆತಿಲ್ಲ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ.
Comments