ಜನ್ ಔಷಧಿ ಮಳಿಗೆಯನ್ನು ನೀವು ಆರಂಭಿಸಿ ಕೈ ತುಂಬಾ ಹಣ ಗಳಿಸಿ- ಕೇಂದ್ರ ಸರ್ಕಾರದಿಂದ ಸಿಗುವ ಧನಸಹಾಯ ಹಾಗೂ ಸೌಲಭ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕೇಂದ್ರ ಸರ್ಕಾರವು ಒಂದಿಷ್ಟು ಯೋಜನೆಗಳನ್ನು ಜಾರಿ ತಂದಿದೆ. ಅಂತಹ ಯೋಜನೆಗಳಲ್ಲಿ ಜನ್ ಔಷಧಿ ಯೋಜನೆ ಕೂಡ ಒಂದು. ಔಷಧಿಗಳು ಸುಲಭವಾಗಿ ಸಾಮಾನ್ಯ ದರದಲ್ಲಿ ಸಿಗುವಂತೆ ಮಾಡುವುದು ಜನ್ ಔಷಧಿ ಮಳಿಗೆಗಳ ಉದ್ದೇಶವಾಗಿದೆ. ನಿರ್ಗತಿಕರಿಗೆ, ಬಡವರಿಗೆ, ಜನಸಾಮಾನ್ಯರಿಗೆ ಅನುಕೂಲಕರವಾಗಲಿಯೆಂದು ಕೇಂದ್ರ ಸರ್ಕಾರವು ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳಲ್ಲಿ ಜನ್ ಔಷಧಿ ಯೋಜನೆ ಕೂಡ ಒಂದಾಗಿದೆ.
ಔಷಧಿಗಳು ಸುಲಭವಾಗಿ ಸಾಮಾನ್ಯ ದರದಲ್ಲಿ ಸಿಗುವಂತೆ ಮಾಡುವುದು ಜನ್ ಔಷಧಿ ಮಳಿಗೆಗಳ ಉದ್ದೇಶವಾಗಿದೆ. ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಮೋದಿ ಸರ್ಕಾರವು ಇದೀಗ ಮುಂದಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ ಉನ್ನತ ಗುಣಮಟ್ಟದ ಔಷಧಿಗಳನ್ನು ಕಡಿಮೆ ದರದಲ್ಲಿ ಒದಗಿಸುವುದಕ್ಕಾಗಿ 2008ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜನ್ ಔಷಧಿ ಮಳಿಗೆಗಳಲ್ಲಿ ಮಾತ್ರೆಗಳು ಕಡಿಮೆ ಬೆಲೆಗೆ ಸಿಗುತ್ತವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಈ ಜನ್ ಔಷಧಿ ಮಳಿಗೆಗಳನ್ನು ತೆರೆಯುವ ಗುರಿಯನ್ನು ಇಲಾಖೆಯು ಹೊಂದಿದೆ. ಮಾರ್ಚ್ 2012ರಲ್ಲಿ ಕೇವಲ 112 ಔಷಧ ಮಳಿಗೆಗಳನ್ನು ತೆರೆಯಲಾಗಿತ್ತು. ಅದರಲ್ಲಿ 99 ಮಳಿಗೆಗಳು ಮಾತ್ರ ಕಾರ್ಯನಿರತವಾಗಿದ್ದವು. ಜನ್ ಔಷಧ ಮಳಿಗೆಗೆಳನ್ನು ತೆರೆಯುವವರಿಗೆ ಪಿಠೋಪಕರಣಕ್ಕಾಗಿ ರೂ. 1 ಲಕ್ಷ, ಕಂಪ್ಯೂಟರ, ಪ್ರಿಂಟರ್ ಮತ್ತಿತರ ಉಪಕರಣಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷಧಿ ನೀಡುವ ಸಲುವಾಗಿ ರೂ. 1 ಲಕ್ಷ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ. ಮಳಿಗೆ ಆರಂಭಿಸಿದ ನಂತರ ಪ್ರತಿ ತಿಂಗಳೂ ಸುಮಾರು 1.5 ಲಕ್ಷದವರೆಗೆ ಔಷಧಿಗಳ ಮೇಲೆ ಪ್ರೋತ್ಸಾಹ ಸಿಗುವ ಸಾಧ್ಯತೆಗಳು ಕೂಡ ಇವೆ. ನೀವು ಕೂಡ ಜನ್ ಔಷಧಿ ಮಳಿಗೆಗಳನ್ನು ತೆರೆಯಬಹುದು. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನ್ ಔಷಧಿ ಮಳಿಗೆ ತೆರೆಯಲು ಸರ್ಕಾರವು ರೂ. 2.5 ಲಕ್ಷ ಧನ ಸಹಾಯವನ್ನು ನೀಡಲಿದೆ. ಇದರ ಜೊತೆಗೆ ಜನ್ ಔಷಧಿ ಮಳಿಗೆಗಾಗಿ ಜಾಗವನ್ನು ಕೂಡ ಉಚಿತವಾಗಿ ನೀಡುತ್ತದೆ.
Comments