ಮನೆಯಿಂದಲೇ ಮಗಳನ್ನು ಹೊರ ಹಾಕಿದ ಜಾಕಿ ಚಾನ್!
ಹಾಲಿವುಡ್ ನ ಆ್ಯಕ್ಷನ್ ಕಿಂಗ್, ಸೂಪರ್ ಸ್ಟಾರ್ ಜಾಕಿ ಚಾನ್ ಮಗಳು ಎಟಾ ಎನ್‍ಜಿ ಇದೀಗ ಮನೆಯಲ್ಲಿ ಇಲ್ಲದೆ ಹಾಂಕಾಂಗ್‍ನ ಬೀದಿ ಬೀದಿಯಲ್ಲಿ ತಿರುಗುತ್ತಿದ್ದಾಳೆ.
ಎಟಾ ಎನ್‍ಜಿ(18), ತನ್ನ ಪ್ರೇಯಸಿ ಆಂಧಿ ಆಟಮ್ ಜೊತೆಯಿರುವ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ಎಟಾ ತನ್ನ ಪ್ರೇಯಸಿ ಜೊತೆ ಬ್ರಿಡ್ಜ್ ನ ಕೆಳಗೆ ವಾಸಿಸುತ್ತಿದ್ದು, ನನ್ನ ಹೆತ್ತವರೇ ನನ್ನ ಈ ಸ್ಥಿತಿಗೆ ಕಾರಣ ಎಂದು ಎಟಾ ಆರೋಪವನ್ನು ವ್ಯಕ್ತ ಪಡಿಸಿದ್ದಾಳೆ.ತಂದೆ ಜಾಕಿ ಚಾನ್ ಹಾಗೂ ತಾಯಿ ಮಾಜಿ ರೂಪದರ್ಶಿ ಎಲೈನ್ ಎನ್ ಜಿ ಇಬ್ಬರಿಂದ ಎಟಾ ಇದೀಗ ದೂರವಾಗಿದ್ದಾಳೆ. ಎಟಾ ಸಲಿಂಗಕಾಮಿ ಎಂದು ಜಾಕಿ ಚಾನ್ ಆಕೆಯನ್ನು ಮನೆಯಿಂದ ಹೊರಹಾಕಿದ್ದು, ಎಟಾ ತನ್ನ ಪ್ರೇಯಸಿ ಜೊತೆ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾಳೆ. ನನ್ನ ಹೆತ್ತವರಿಂದ ನಾನು ಒಂದು ತಿಂಗಳಿನಿಂದ ದೂರ ಮಾಡಿದ್ದಾರೆ. ನಾವು ಬ್ರಿಡ್ಜ್ ಕೆಳಗೆ ಹಾಗೂ ಬೇರೆ ಬೇರೆ ಜಾಗಗಳಲ್ಲಿ ರಾತ್ರಿಯನ್ನು ಕಳೆಯುತ್ತಿದ್ದೇವೆ. ನಾವು ಆಸ್ಪತ್ರೆ, ಪೊಲೀಸ್ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾತರ ಸಹಾಯ ಕೇಂದ್ರಗಳಲ್ಲಿ ಸಹಾಯ ಕೇಳಿದರೂ ಕೂಡ ಯಾರೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ ಎಂದು ಎಟಾ ವಿಡಿಯೋ ದಲ್ಲಿ ತಿಳಿಸಿದ್ದಾಳೆ.
Comments