ಡೇಟಿಂಗ್ ಗೆ ಅವಕಾಶ ನೀಡ್ತಿದೆ ಫೇಸ್ ಬುಕ್

ಸಾಮಾಜಿಕ ಜಾಲತಾಣವು ಫೇಸ್ಬುಕ್ ಡೇಟಿಂಗ್ ಗೆ ಸಂಬಂಧ ಪಟ್ಟಂತೆ ಹೊಸ ಫೀಚರ್ ಶುರು ಮಾಡ್ತಿದೆ. ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್ಬರ್ಗ್ ಕಾರ್ಯರ್ಕಮದಲ್ಲಿ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ದೀರ್ಘಕಾಲದ ಸಂಗಾತಿಯನ್ನು ಹುಡುಕಲು ಈ ಡೇಟಿಂಗ್ ಫೀಚರ್ ನೆರವಾಗಲಿದೆ ಎಂದವರು ಹೇಳಿದ್ದಾರೆ. ಫೇಸ್ಬುಕ್ ನ ಈ ಹೊಸ ಫೀಚರ್ ಸಂಪೂರ್ಣ ಉಚಿತವಾಗಲಿದೆ.. ಹೊಸ ಫೀಚರ್ ನಲ್ಲಿ ಬಳಕೆದಾರರು ಹೊಸ ಪ್ರೊಫೈಲ್ ಕೂಡ ರಚಿಸಬಹುದು. ಅವರ ನೆಟ್ವರ್ಕ್ ಸ್ನೇಹಿತರಿಗೆ ಕಾಣಿಸುವುದಿಲ್ಲ. ಬಳಕೆದಾರರ ಆಸಕ್ತಿ ಹಾಗೂ ಪ್ರೊಫೈಲ್ ಆಧಾರದ ಮೇಲೆ ಫೇಸ್ಬುಕ್ ಅದಕ್ಕೆ ಹೊಂದುವ ಸಂಗಾತಿಗಳಿಗೆ ಇವ್ರ ಪ್ರೊಫೈಲ್ ಅನ್ನು ಕಳುಹಿಸಲಿದೆ. ಬಳಕೆದಾರರ ಡೇಟಾ ಹಾಗೂ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಫೀಚರ್ ಶುರು ಮಾಡ್ತಿರುವುದಾಗಿ ಫೇಸ್ಬುಕ್ ಹೇಳಿದೆ. ಇನ್ನು ಮುಂದೆ ನಿಮ್ಮ ಸಂಗಾತಿಯನ್ನು ಫೇಸ್ ಬುಕ್ ನಲ್ಲೆ ಹುಡುಕಿಕೊಳ್ಳಬಹುದು
Comments