ಸೀನಿಯರ್ ಸಿಟಿಜನ್ಸ್ ಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ..!

03 May 2018 10:47 AM | General
736 Report

ಪ್ರಧಾನಮಂತ್ರಿ ವಯ ವಂದನಾ ಯೋಜನೆಯಲ್ಲಿನ ಹೂಡಿಕೆಯ ಮಿತಿಯನ್ನು ವಿಸ್ತರಿಸಲಾಗಿದ್ದು, ಯೋಜನೆಯ ಹೂಡಿಕೆ ಮಿತಿಯನ್ನು ದ್ವಿಗುಣಗೊಳಿಸಿದೆ. 7.5 ಲಕ್ಷ ರೂ.ನಿಂದ 15 ಲಕ್ಷ ರೂ. ಗೆ ಏರಿಕೆಯನ್ನು ಮಾಡಲಾಗಿದೆ. ಅಲ್ಲದೇ, ಯೋಜನೆಯ ಚಂದದಾರಿಕೆಯ ಅವಧಿಯನ್ನು 2 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಯೋಜನೆಯಡಿ ಶೇ. 8 ರಷ್ಟು ಬಡ್ಡಿಯ ದರವನ್ನು ನೀಡಲಾಗುವುದು. ಹಿರಿಯ ನಾಗರಿಕರು ಮಾಸಿಕವಾಗಿ10,000 ರೂ.ವರೆಗೂ ಪಿಂಚಣಿ ಪಡೆಯಬಹುದು. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. 2020 ರ ಮಾರ್ಚ್ 31 ರ ವರೆಗೆ ಯೋಜನೆಯ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ. ಯೋಜನೆಯಲ್ಲಿ ಹಣ ತೊಡಗಿಸುವ ಹಿರಿಯ ನಾಗರಿಕರಿಗೆ ಶೇ. 8 ರಷ್ಟು ಬಡ್ಡಿದರದಲ್ಲಿ ಪಿಂಚಣಿ ನೀಡಲಿದ್ದು, ಮಾಸಿಕ, 3 ತಿಂಗಳು, 6 ತಿಂಗಳು ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments