ರಾಜಧಾನಿಯಲ್ಲಿ ಮತ್ತೆ ವರುಣನ ಆರ್ಭಟ
ರಾಜ್ಯ ರಾಜಧಾನಿಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಸುರಿಯುತ್ತಲೇ ಇದೆ. ಬುಧವಾರ ಕೂಡ ಮಳೆಯ ಆರ್ಭಟ ಮುಂದುವರೆದಿದೆ.
ವಿಧಾನಸೌಧ, ಕಬ್ಬನ್ ಪಾರ್ಕ್, ಎಂಜಿ ರಸ್ತೆ, ರೇಸ್‌ಕೋರ್ಸ್ ರೋಡ್, ಶಿವಾಜಿನಗರ, ಜಯನಗರ, ಮಲ್ಲೇಶ್ವರಂ, ವಿಜಯನಗರ ಬೆಂಗಳೂರು ಹೊರ ವಲಯಗಳಲ್ಲಿ ಗಾಳಿ ಸಹಿತ ಮಳೆ ಶುರುವಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗುಡುಗು ಸಹಿತ ಆಲಿಕಲ್ಲಿನ ಮಳೆ ಬೆಂಗಳೂರು ನಗರದಲ್ಲಿ ಈ ವರ್ಷ ಕಾಣುತ್ತಿದ್ದು ಬಿಸಿಲಿನ ಬೇಗೆಯಿಂದ ತತ್ತರಿಸಿದವರಿಗೆ ಜನತಗೆ ತಂಪನ್ನು ಎರೆಯುತ್ತಿದೆ. ಆದರೆ ಪದೇ ಪದೇ ಆಲಿಕಲ್ಲು ಬಿರುಗಾಳಿ ಮಳೆ ಸುರಿಯುವುದರಿಂದ ಹಾನಿ ಸಹ ಉಂಟಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಕೆಯ ಮಾಹಿತಿಯನ್ನು ನೀಡಿದ್ದಾರೆ.
Comments