ಬಿಳಿ ಹೆಂಡ್ತಿ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ವಿಧಿವಶ

ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಬಿಳಿಹೆಂಡ್ತಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ್ದ ಅನಿಲ್ ಕುಮಾರ್ ವಿಧಿವಶರಾಗಿದ್ದಾರೆ. ಬಿಳಿ ಹೆಂಡ್ತಿ ಸಿನಿಮಾ ಖ್ಯಾತಿಯ ಹಿರಿಯ ನಟ ಅನಿಲ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ.
ಇಂದು ಬೆಳಗ್ಗೆ ಹೃದಯಾಘಾತದಿಂದ ಅನಿಲ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಮಲ್ಲೇಶ್ವರಂನ ನಿವಾಸ ಅಲಮೇಲು ಅಪಾರ್ಟ್ ಮೆಂಟ್ ಬಳಿ ಅನಿಲ್‍ಕುಮಾರ್ ಅವರ ಪಾರ್ಥೀವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಅನಿಲ್ ಅವರ ಕೊನೆ ಆಸೆಯಂತೆ ಪಾರ್ಥೀವ ಶರೀರವನ್ನ ಎಂ.ಎಸ್ ರಾಮಯ್ಯ ಕಾಲೇಜ್‍ಗೆ ನೀಡಲಾಗುವುದು ಎಂದು ಕುಟುಂಬ ಮೂಲಗಳು ಹೇಳಿದ್ಧಾರೆ.
Comments